ಚಿಕ್ಕಮಗಳೂರು : ಮೂವರು ಮಹಿಳೆಯರಿಗೆ ವಂಚನೆ ಮಾಡಿ ಮದುವೆಯಾಗಿದ್ದಲ್ಲದೇ 4ನೇ ಮದುವೆಗೆ ಸಿದ್ಧತೆ ನಡೆಸಿದ್ದ ಭೂಪನ ವಿರುದ್ಧ ಮೂರನೇ ಪತ್ನಿ ಹಾಗೂ ನಾಲ್ಕನೇ ಪತ್ನಿಯ ತಂದೆ ನ್ಯಾಯಕ್ಕಾಗಿ ಕಾನೂನಿನ ಮೊರೆ ಹೋಗಿದ್ದಾರೆ.
ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ನಿವಾಸಿ ಯೂಸುಫ್ ಹೈದರ್ ಎಂಬಾತ ಮೂವರು ಪತ್ನಿಯರಿಗೆ ವಂಚನೆ ಮಾಡಿದ್ದಲ್ಲದೇ, ಸದ್ಯ ನಾಲ್ಕನೇ ಮದುವೆಯಾಗಲು ಯುವತಿಯೊಬ್ಬಳನ್ನು ಕರೆದುಕೊಂಡು ಕಾಲ್ಕಿತ್ತಿದ್ದಾನೆ.
ಯೂಸೂಫ್ ಹೈದರ್ ಒಬ್ಬ ಮಂತ್ರವಾದಿಯಾಗಿದ್ದು, ಅಮಾಯಕರಿಗೆ ವಂಚಿಸುತ್ತಿದ್ದ. ಹೀಗೆ ಬಂದವರ ಪೈಕಿ ಕೆಲ ಮಹಿಳೆಯವರಿಗೆ ತಾನು ಮದುವೆಯಾಗಿರುವುದನ್ನು ಮುಚ್ಚಿಟ್ಟು ಸುಳ್ಳು ಹೇಳಿ ಮದುವೆಯಾಗುತ್ತಿದ್ದ ಎನ್ನಲಾಗಿದೆ.
ಹೀಗೆ ಯೂಸುಫ್ ಹೈದರ್ ಮೂಡಿಗೆರೆ, ಸಕಲೇಶಪುರ, ಆಲ್ದೂರಿನ ಮೂವರನ್ನು ವಿವಾಹವಾಗಿದ್ದ. ಇತ್ತೀಚೆಗೆ ಕಳಸ ಮೂಲದ ಯುವತಿಯನ್ನು ನಂಬಿಸಿ ನಾಲ್ಕನೇ ಮದುವೆಗೆ ರೆಡಿಯಾಗಿದ್ದ ಎನ್ನಲಾಗಿದೆ.
ಇದನ್ನೂ ಓದಿ: SUICIDE: ನಾನು ಕೆಟ್ಟ ಮಗಳು, ಮಿಸ್ ಯೂ ಡ್ಯಾಡಿ, ಮಮ್ಮಿ!
ಇದನ್ನು ತಿಳಿದ ಯೂಸುಫ್ನ ಮೂರನೇ ಪತ್ನಿ ಹಾಗೂ ನಾಲ್ಕನೇ ಮಹಿಳೆಯ ತಂದೆ ಕಾನೂನು ಸಮರಕ್ಕೆ ಇಳಿದಿದ್ದಾರೆ.