ETV Bharat / state

ಫೋನ್ ಮಾಡಿದ್ರೆ ಮನೆಗೆ ಬರುತ್ತೆ ಊಟ: ಹಸಿದವರ ಹೊಟ್ಟೆ ನಾವು ತುಂಬಿಸ್ತೀವಿ ಅಂತಿದ್ದಾರೆ ಸಹಾಯ್ ತಂಡ

author img

By

Published : May 28, 2021, 1:51 PM IST

ಕೊರೊನಾ ಸಮಯದಲ್ಲಿ ಕಳೆದೊಂದು ವರ್ಷದಿಂದ ಅನೇಕ ಸಂಘಟನೆಗಳು, ತಂಡಗಳು, ಆಸಕ್ತರು ನಾನಾ ರೀತಿಯಲ್ಲಿ ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಅದೇ ರೀತಿ ಚಿಕ್ಕಮಗಳೂರು ನಗರದ ಸಹಾಯ್ ಅನ್ನೋ ತಂಡ ಕಳೆದ 20 ದಿನಗಳಿಂದ ಜನರ ಹಸಿವನ್ನ ನೀಗಿಸುತ್ತಿದೆ.

chikkamagalur
ಊಟ ವಿತರಿಸುತ್ತಿರುವ ಸಹಾಯ್​ ತಂಡ

ಚಿಕ್ಕಮಗಳೂರು: ಒಂದೆಡೆ ಹೆಮ್ಮಾರಿ ಕೊರೊನಾದಿಂದ ಜನ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಲಾಕ್‍ಡೌನ್‍ನಿಂದ ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದೆರಡು ತಿಂಗಳ ಜನತಾ ಕಫ್ರ್ಯೂ, ಲಾಕ್‍ಡೌನ್ ವೇಳೆಯಲ್ಲಿ ಜನಸಾಮಾನ್ಯರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೆಲವರು ದುಡಿಮೆಯೇ ಇಲ್ಲದೆ ಹಸಿವಿನಿಂದ ಹೈರಾಣಾದರೆ, ಮತ್ತೆ ಕೆಲವರಿಗೆ ಹೋಟೆಲ್​ಗಳಿಲ್ಲದ ಕಾರಣಕ್ಕೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿಯಂತಾಯ್ತು. ಆದ್ರೆ, ನೀವು ಚಿಂತೆ ಮಾಡ್ಬೇಡಿ. ಉಪವಾಸವೂ ಇರಬೇಡಿ. ಈ ನಂಬರ್​ಗೆ ಕರೆ ಮಾಡಿ. ನಿಮ್ಮ ಹೊಟ್ಟೆ ನಾವು ತುಂಬಿಸ್ತೀವಿ ಅಂತಿದ್ದಾರೆ ಕಾಫಿನಾಡಿನ ಸಹಾಯ್ ತಂಡದ ಸದಸ್ಯರು.

ಚಿಕ್ಕಮಗಳೂರಿನಲ್ಲಿ ಊಟ ವಿತರಿಸುತ್ತಿರುವ ಸಹಾಯ್​ ತಂಡ

ಬಿಸಿ ಬಿಸಿ ಬಿರಿಯಾನಿ ಪ್ಯಾಕ್ ಮಾಡ್ತಿರೋ ತಂಡದ ಸದಸ್ಯರು, ನಾನು ವೆಜ್ ಸರ್ ಅನ್ನೋರ್ಗೆ ಸ್ಪೆಷಲ್ ಮೊಸರನ್ನ. ಕಾಲ್ ಮಾಡಿದ್ರೆ ಇದ್ದಲ್ಲಿಗೆ ಹೋಗುತ್ತೆ ಫುಡ್. ಫ್ರೀ ಊಟ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಅನ್ನದಾನ ಸುಖಿನೋಭವಂತು ಎನ್ನುತ್ತಿರುವ ಜನ.. ಹೌದು, ಚಿಕ್ಕಮಗಳೂರು ನಗರದ ಸಹಾಯ್ ಎಂಬ ಹೆಸರಿನ ತಂಡ ಕಳೆದ 20 ದಿನಗಳಿಂದ ಜನರ ಹಸಿವನ್ನ ನೀಗಿಸುತ್ತಿದೆ.

ಕೊರೊನಾ ಸೋಂಕಿನಿಂದ ನೀವು ಮನೆಯಲ್ಲೇ ಲಾಕ್ ಆಗಿದ್ರು ಒಂದ್ ಕಾಲ್ ಮಾಡಿದ್ರೆ ಸಾಕು ಊಟ ಬರುತ್ತೆ. ದುಡಿಮೆಯೇ ಇಲ್ದೆ ಊಟಕ್ಕೆ ಪರದಾಡ್ತಿದ್ರೂ ನೋ ಪ್ರಾಬ್ಲಂ. ಒಂದ್ ಫೋನ್ ಕಾಲ್​ಗೆ ಊಟ ರೆಡಿ. ಇನ್ನು ಆಸ್ಪತ್ರೆಗೆ ಬಂದ ಜನ ಅಯ್ಯೋ ಹೋಟೆಲ್ ಇಲ್ಲ ಅಂತ ಚಿಂತಿಸುವಂತಿಲ್ಲ. ಆಸ್ಪತ್ರೆ ಮುಂಭಾಗವಿರುವ ಬ್ಯಾನರ್ ನೋಡಿ ಒಂದು ಫೋನ್ ಮಾಡಿದ್ರೆ ಊಟ ಬಂದೇಬಿಡ್ತು. ಯಾರೂ ಕೂಡ ಹಸಿವಿನಿಂದ ಸಂಕಟ ಅನುಭವಿಸಬಾರದು ಅನ್ನೋದು ಈ ಸಹಾಯ್ ತಂಡದ ಗುರಿ. ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ಶುಚಿ-ರುಚಿಯಾದ ಅಡುಗೆ ತಯಾರಿಸಿ ನಗರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಿಗೂ ಊಟ ಪಾರ್ಸೆಲ್ ಹೋಗುತ್ತೆ. ತಂಡದ ಸದಸ್ಯರು ಕರೆ ಮಾಡಿದ ಸ್ಥಳಕ್ಕೆ ಹೋಗಿ ಊಟವನ್ನ ಕೊಟ್ಟು ಬರುತ್ತಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಕಠಿಣ ಲಾಕ್‍ಡೌನ್ ಇರೋದ್ರಿಂದ ಜನ ಅನುಭವಿಸ್ತಿರೋ ಕಷ್ಟ ಒಂದೆರಡಲ್ಲ. ಹೊರಗಡೆ ದುಡಿಯೋಕು ಹೋಗದ ಪರಿಸ್ಥಿತಿ ಅನೇಕರಿಗೆ ಎದುರಾಗಿದೆ. ನಿಜವಾಗಲೂ ಸಂಕಷ್ಟದಲ್ಲಿದ್ದು ಊಟ-ತಿಂಡಿಗಾಗಿ ಕರೆ ಮಾಡಿದರೆ ಈ ತಂಡದ ಸದಸ್ಯರು ಮನೆ ಬಾಗಿಲಿಗೆ ಹೋಗಿ ಊಟ-ತಿಂಡಿ ಕೊಡುತ್ತಿದ್ದಾರೆ. ಆದ್ರೆ, ಬೆಳಗ್ಗೆ ತಿಂಡಿ ಬೇಕು ಅಂದ್ರೆ ರಾತ್ರಿಯೇ ಕರೆ ಮಾಡಿ ಹೇಳಬೇಕು. ಮಧ್ಯಾಹ್ನದ ಊಟ ಬೇಕು ಅಂದ್ರೆ ಬೆಳಗ್ಗೆ 10 ಗಂಟೆಯೊಳಗೆ ಕರೆ ಮಾಡಿ ತಿಳಿಸಬೇಕು. ರಾತ್ರಿಗೂ ಅಗತ್ಯವಿದ್ರೆ ಮೊದಲೇ ಹೇಳಿದ್ರೆ ಊಟವನ್ನ ರೆಡಿ ಮಾಡಿ ಕೊಡುತ್ತೆ ಈ ಸಹಾಯ್ ತಂಡ. ಯಾವ-ಯಾವ ಸ್ಥಳಗಳಿಗೆ ಎಷ್ಟೆಷ್ಟು ಊಟ ಬೇಕು ಅಂತಾ ಪಟ್ಟಿ ಮಾಡಿ, ಒಂದೊಂದು ಮಾರ್ಗದ ಕಡೆ ಒಂದೊಂದು ತಂಡ ಹೋಗಿ ಹಸಿದವರ ಹೊಟ್ಟೆ ತುಂಬಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.