ETV Bharat / state

ಮುಖ್ಯಮಂತ್ರಿ ಸಿದ್ದರಾಮಯ್ಯ 'ಮತಾಂತರ'ದ ರಾಯಭಾರಿ: ಆರ್ ಅಶೋಕ್ - ಮತಾಂತರ

''ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂತರದ ರಾಯಭಾರಿಯಾಗಿದ್ದಾರೆ'' ಎಂದು ಮಾಜಿ ಸಚಿವ ಆರ್ ಅಶೋಕ್ ಚಿಕ್ಕಮಗಳೂರಿನಲ್ಲಿ ಶನಿವಾರ ಹೇಳಿದರು.

R Ashok
ಮುಖ್ಯಮಂತ್ರಿ ಸಿದ್ದರಾಮಯ್ಯ 'ಮತಾಂತರ'ದ ರಾಯಭಾರಿ: ಆರ್. ಅಶೋಕ್
author img

By

Published : Jun 24, 2023, 9:16 PM IST

ಮಾಜಿ ಸಚಿವ ಆರ್. ಅಶೋಕ್ ಮಾತನಾಡಿದರು.

ಚಿಕ್ಕಮಗಳೂರು: ''ಮತಾಂತರವಾದರೆ ಕಾಂಗ್ರೆಸ್ಸಿಗೆ ಮತ ಬೀಳುತ್ತೆ. ಹಾಗಾಗಿ, ಮತಾಂತರಕ್ಕೆ ಸಿದ್ದರಾಮಯ್ಯ ಮುಕ್ತ ಅವಕಾಶ ಮಾಡಿ ಕೊಟ್ಟಿದ್ದಾರೆ'' ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಸಿದ್ದರಾಮಯ್ಯನವರಿಗೆ ಹಿಂದೂಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹಾಗಾದ್ರೆ, ಪಕ್ಕದ ಮನೆಯ ಅಮರನಾಥ್ ಇದ್ದವರು, ಮುಂದೆ ಅಬ್ದುಲ್ ಘನಿ ಆಗ್ಬೇಕಾ. ಈ ದೇಶ ನಮ್ಮ ಕೈಯಲ್ಲಿ ಉಳಿಬೇಕು. ಅಂದ್ರೆ, ಮತಾಂತರ ಆಗ್ಬೇಕು ಅಂತ ಬ್ರಿಟಿಷರು ಹೇಳಿದ್ರು. ಬಾಬರ್, ಔರಂಗಜೇಬ್ ಈ ದೇಶ ನಮ್ಮ ಕೈಗೆ ಬರಬೇಕಾದ್ರೆ ಎಲ್ಲರೂ ಮುಸ್ಲಿಂ ಆಗ್ಬೇಕು ಅಂದಿದ್ದರು. ಅದಕ್ಕೆ ಸಾಕ್ಷಿ ಇಲ್ಲೇ ಇದ್ದಾರೆ ನೋಡಿ ಕೆ.ಜಿ. ಬೋಪಯ್ಯನವರು. ಬೋಪಯ್ಯರನ್ನು ನೋಡ್ಬೇಡಿ, ಅವರಲ್ಲ ಮಾಡಿದ್ದು, ಟಿಪ್ಪು ಲಕ್ಷಾಂತರ ಜನರನ್ನ ಕನ್ವರ್ಟ್ ಮಾಡಿದ್ದ. ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

''ಲವ್ ಜಿಹಾದ್ ಅಂದ್ರೆ, ಲವ್ ಅಟ್ ಫಸ್ಟ್ ಸೈಟ್ ಅಲ್ಲ. ಲವ್‌ ಅಟ್ ಬ್ಯಾಕ್ ಸೈಟ್, ಲವ್​ಗೆ ಟ್ರೈನಿಂಗ್ ಕೊಡ್ತಾರೆ. ಹಂಗೆ ಹೋಗಿ ಲವ್ ಮಾಡಲ್ಲ, ಮೊದಲೇ ಎಲ್ಲಾ ಪ್ರಿಪೇರ್ ಆಗಿರುತ್ತಾರೆ. ಒಳ್ಳೆಯ ಬೈಕ್ ಕೊಡುಸ್ತಾರೆ, ಬಾಡಿ ಬಿಲ್ಡ್ ಮಾಡಲು ಜಿಮ್​ಗೆ ಕಳಿಸ್ತಾರೆ. ಒಳ್ಳೆಯ ಬಟ್ಟೆ ಕೊಟ್ಟು ಖರ್ಚಿಗೆ ಕಾಸು ಕೊಡ್ತಾರೆ. ಹಿಂದೂ ಹುಡುಗಿಯನ್ನು ಲವ್ ಮಾಡು ಅಂತ ಕಳಿಸ್ತಾರೆ. ಇದು ಲವ್ ಜಿಹಾದ್ ಅಂದ್ರೆ. ಲವ್ ಅಟ್ ಫಸ್ಟ್ ಸೈಟ್ ಅಲ್ಲ. ಹೀಗೆ ಮತಾಂತರ ಮಾಡಿ ದೇಶವನ್ನು ಕಪಿಮುಷ್ಠಿಯಲ್ಲಿ ಹಿಡಿಯಲು ಯತ್ನ ಮಾಡುತ್ತಾರೆ. ಬಿಜೆಪಿ ಸರ್ಕಾರ ಎಲ್ಲದರ ಬಾಗಿಲು ಹಾಕಿತ್ತು. ಈಗ ಕಾಂಗ್ರೆಸ್ ಸರ್ಕಾರ ಗೇಟ್ ಓಪನ್ ಮಾಡಿ, ಮುಕ್ತ ಅವಕಾಶ ನೀಡಿದೆ ಎಂದು ಆರ್. ಅಶೋಕ್ ಗರಂ ಆದರು.

ಕಾಂಗ್ರೆಸ್ ಮಾಡುವುದು ಹಿಂದೂ ವಿರೋಧಿ-ಈಶ್ವರಪ್ಪ: ''ಕಾಂಗ್ರೆಸ್​​ ಪಕ್ಷ ಹೇಳುವುದು ಜಾತ್ಯತೀತವಾದ, ಆದ್ರೆ ಮಾಡುವುದು ಹಿಂದೂ ವಿರೋಧಿ ನೀತಿ'' ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು. ಹಾವೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಲವಂತವಾಗಿ ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಾವು ಜಾರಿಗೊಳಿಸಿದ್ದೆವು. ಕಾಂಗ್ರೆಸ್ ಸರ್ಕಾರ ಈಗ ಅವುಗಳನ್ನು ವಾಪಸ್ ಪಡೆಯುವ ಕಾರ್ಯಕ್ಕೆ ಮುಂದಾಗಿದೆ. ಈ ಮಾರ್ಗದ ಮೂಲಕ ಮುಸ್ಲಿಮರನ್ನು ಸಂತೃಪ್ತಿಗೊಳಿಸಲು ತೊಡಗಿದೆ ಎಂದು ಈಶ್ವರಪ್ಪ ಗರಂ ಆದರು.

''ಕಾಂಗ್ರೆಸ್ ವಿಧಿ ​370 ಜಾರಿ ಆಗಬಾರದು ಅಂದುಕೊಂಡಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬಾರದು ಹೇಳಿತ್ತು. ಆದರೆ, ಇವುಗಳಲ್ಲಿ ಕಾಂಗ್ರೆಸ್‌ಗೆ ನಿರಾಸೆ ಮೂಡಿದೆೆ. ದೇಶದಲ್ಲಿ ಮೊಗಲರ ಕಾಲದಲ್ಲಿ ಯಾವೆಲ್ಲ ದೇವಸ್ಥಾನಗಳನ್ನು ಧ್ವಂಸ ಮಾಡಿ ಮಸೀದಿ ಕಟ್ಟಿದ್ದಾರೋ ಆ ಪ್ರದೇಶಗಳಲ್ಲಿ ಮತ್ತೆ ದೇವಸ್ಥಾನ ಕಟ್ಟುತ್ತೇವೆ. ಕಾಶಿ ವಿಶ್ವನಾಥ್ ದೇವಸ್ಥಾನ ಹಾಗೂ ಮಥುರಾದಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಿಸುತ್ತೇವೆ. ಆದರೆ, ಹೊಸದಾಗಿ ಕಟ್ಟಿಸಿದ ಮಸೀದಿಗಳನ್ನು ತೆರವು ಮಾಡುವುದಿಲ್ಲ'' ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಹೇಳುವುದು ಜಾತ್ಯತೀತವಾದ, ಮಾಡುವುದು ಹಿಂದೂ ವಿರೋಧಿ : ಮಾಜಿ ಸಚಿವ ಈಶ್ವರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.