ಚಿಕ್ಕಮಗಳೂರು: ಸಾಮಾಜಿಕ ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯುಮದವರೊಂದಿಗೆ ಮಾತನಾಡಿದ ಅವರು, ಒಂದು ಕೋಮಿನ ಜನ ಇನ್ನೊಂದು ಕೋಮಿನ ವ್ಯಾಪಾರಕ್ಕೆ ಹೋಗಬಾರದು ಅಂತಾ ಏನಾದ್ರೂ, ಫತ್ವಾ ಹೊರಡಿಸಿದ್ರೆ, ಅದು ದೇಶದ್ರೋಹದ ಕೆಲಸವಾಗುತ್ತೆ. ಈ ಸಂಬಂಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ, ಗೃಹ ಸಚಿವರಿಗೂ ಈ ಕುರಿತು ಮನವಿ ಮಾಡುತ್ತಿದ್ದೇನೆ ಎಂದರು.
ಗಂಗೊಳ್ಳಿಯಲ್ಲಿ ನಡೆದಿರುವ ಘಟನೆ ಬೇರೆಲ್ಲಿಯೂ ಮರುಕಳಿಸಬಾರದು. ಗಂಗೊಳ್ಳಿಯಲ್ಲಿ ಯಾರು ಫತ್ವಾ ಹೊರಡಿಸಿದ್ದಾರೋ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವೆ ಆಗ್ರಹಿಸಿದ್ರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಕಾಂಟ್ರಾಕ್ಟರ್ಗೆ ಐಟಿ ಶಾಕ್.. ಡಿ.ವೈ. ಉಪ್ಪಾರ ಮನೆ ಮೇಲೆ ಅಧಿಕಾರಿಗಳ ದಾಳಿ
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಇಂತಹ ಷಡ್ಯಂತ್ರ ನಿರಂತರವಾಗಿ ನಡೆಯುತ್ತಿದೆ. ದೇಶದ ಬೇರೆ ಬೇರೆ ಕಡೆಯೂ ಇಂಥ ದುರ್ಘಟನೆಗಳು ನಡೆಯುತ್ತಿವೆ. ಇದಕ್ಕೆ ನಮ್ಮ ಸರ್ಕಾರ ಅವಕಾಶ ನೀಡಲ್ಲ ಎಂದು ಹೇಳಿದರು.