ಚಿಕ್ಕಮಗಳೂರು : ಇಷ್ಟು ವರ್ಷ ಇಲ್ಲದ ವಿವಾದ ಈಗೇಕೆ ಬಂತು. ಹಿಜಾಬನ್ನೇ ಶಾಲಾ-ಕಾಲೇಜುಗಳಲ್ಲಿ ಯೂನಿಫಾರಂ ಮಾಡಿ ಎಂದು ಹಿಜಾಬ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ನಾನೇ ಬೇರೇ ಎನ್ನುವ ಮನಸ್ಥಿತಿ ಅಪಾಯಕಾರಿ. ಬಹಳ ಸಂಕಷ್ಟವನ್ನು ಅನುಭವಿಸಿರುವ ಜಗತ್ತಿನ ರಾಷ್ಟ್ರ ಭಾರತ. ಸಂಕಷ್ಟ ಅನುಭವಿಸಿ ಪ್ರತೀಕಾರ ಮಾಡದಿರುವ ರಾಷ್ಟ್ರ ಕೂಡ ಭಾರತ.
ಬಹು ಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುವ ಘಟನೆಗಳು ಜಗತ್ತಿನೆಲ್ಲೆಡೆ ಕಂಡು ಬರುತ್ತವೆ. ಜಗತ್ತಿನಾದ್ಯಂತ ಅಲ್ಪ ಸಂಖ್ಯಾತರು ನಮಗೆ ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಾರೆ. ಆದರೆ, ದುರ್ದೈವ, ನಮ್ಮ ದೇಶದಲ್ಲಿ ಬಹು ಸಂಖ್ಯಾತರು ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ ಎಂದರು.
ಬಹು ಸಂಖ್ಯಾತರು ಸಮಾನತೆ ಇರಲಿ ಎಂದು ಹೇಳುತ್ತಿದ್ದಾರೆ. ಅಲ್ಪಸಂಖ್ಯಾತರು ನಮ್ಮದೇ ಬೇರೆ, ನಮ್ಮದೇ ನಡೀಬೇಕು ಎಂದು ಹೇಳುತ್ತಿದ್ದಾರೆ. ಜಗತ್ತಿನಲ್ಲಿ ಎಲ್ಲೂ ನಡೆಯಲು ಸಾಧ್ಯವಾಗದ್ದು ಭಾರತದಲ್ಲಿ ಮಾತ್ರ ನಡೀತಿದೆ. ಅದಕೊಸ್ಕರನೇ ಶಾಲೆಯಲ್ಲಿ ಯೂನಿಫಾರಂ ಇರುವುದು. ಅಲ್ಲಿ ನಾನು ಬೇರೆ ಎಂದರೆ ಅಲ್ಲಿಂದಲೇ ಪ್ರತ್ಯೇಕತೆ ಹುಟ್ಟಿ ಕೊಳ್ಳುತ್ತದೆ. ನಾನೇ ಬೇರೆ ನೀನೇ ಬೇರೆ ಎನ್ನುವುದು ಜಾತ್ಯಾತೀತತೆ ಅಲ್ಲ ಎಂದು ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ :ಹಿಜಾಬ್ ವಿವಾದ: ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಹೈಕೋರ್ಟ್ ಸೂಚನೆ