ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಡೆದ ಐ ಕಾಯಿನ್ - ಬಿಟ್ ಕಾಯಿನ್ ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ಕೋಟ್ಯಂತರ ರೂ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮೋಸ ಮಾಡಿದ 15 ಜನ ಆರೋಪಿಗಳನ್ನು ಚಿಕ್ಕಮಗಳೂರು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ 1 ಕೋಟಿ 6 ಲಕ್ಷ ರೂ. ಮೌಲ್ಯದ 10 ಕಾರುಗಳು ಮತ್ತು 43 ಲಕ್ಷ ಹಣ, 5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರಿನ ರುಕ್ಸಿದಾ ಬಾನು ಸೇರಿದಂತೆ 15 ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
14 ಮಂದಿ ಆರೋಪಿಗಳು ಉಡುಪಿ - ಮಂಗಳೂರು ಮೂಲದವರರಾಗಿದ್ದು ಡಬಲ್ ಹಣ ನೀಡುತ್ತೇವೆ ಎಂದೂ ಸಾರ್ವಜನಿಕರಿಂದ ಆನ್ ಲೈನ್ ಮೂಲಕ ಹಣ ಹೂಡಿಸಿ ವಂಚನೆ ಮಾಡಿದ್ದರು. ಈ ಕುರಿತು ಈ ಹಿಂದೇ 100ಕ್ಕೂ ಹೆಚ್ಚು ಮಂದಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಹಿನ್ನಲೆಯಲ್ಲಿ ಪೋಲಿಸರು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಯಾರದಾರೂ ಸಾರ್ವಜನಿಕರು ಮೋಸ ಹೋಗಿದ್ದರೇ ದೂರು ನೀಡಬಹುದು ಆ ಕುರಿತು ಇನ್ನು ಹೆಚ್ಚಿನ ತನಿಖೆ ಮಾಡಲಾಗುವುದು ಎಂದು ಜಿಲ್ಲಾ ವರಿಷ್ಠಧಿಕಾರಿ ಸೂಚನೆ ನೀಡಿದ್ದಾರೆ.