ಚಿಕ್ಕಮಗಳೂರು: ದಿ.ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಚಿಕ್ಕಮಗಳೂರಿನ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನವಾಗಿದ್ದು, ಈ ವೇಳೆ ಚಿತ್ರ ಮಂದಿರದೊಳಗೆ ಪಟಾಕಿ ಸಿಡಿಸಿ ಅಭಿಮಾನಿಗಳು ಕಿರಿಕಿರಿ ಉಂಟು ಮಾಡಿದ್ದಾರೆ.
ಸಿನಿಮಾ ಮಂದಿರದ ಒಳಗೆ ಪಟಾಕಿ ಹಚ್ಚಿದ ಪರಿಣಾಮ ಹೊಗೆ ಆವರಿಸಿದ ಕೆಲಕಾಲ ಸಿನಿಮಾವನ್ನು ಸ್ಥಗಿತಗೊಳಿಸಲಾಗಿತ್ತು. ಕೆಲ ನಿಮಿಷದ ಬಳಿಕ ಮತ್ತೆ ಸಿನಿಮಾ ಆರಂಭವಾಗಿದ್ದು, ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಸಿನಿಮಾ ನೋಡಿ ಶುಭ ಹಾರೈಸಿದ್ದಾರೆ.
ಸಿನಿಮಾ ಆರಂಭವಾಗುತ್ತಿದಂತೆ ಪುನೀತ್ ಭಾವಚಿತ್ರ ಹಿಡಿದು ಅಭಿಮಾನಿಗಳು ಸಂತೋಷದಿಂದ ಸಂಭ್ರಮಿಸಿದ್ದರು. ಚಿತ್ರ ವೀಕ್ಷಣೆಗಾಗಿ ನೂರಾರು ಮಂದಿ ಅಭಿಮಾನಿಗಳು ಚಿತ್ರಮಂದಿರದತ್ತ ಧಾವಿಸಿ ಬರುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪುನೀತ್ ಕಟೌಟ್ಗೆ ಹಾರ ಹಾಕಿ, ಹಾಲು ಸುರಿದಿದ್ದಾರೆ. ಇದೇ ವೇಳೆ ಅರಣ್ಯ ಅಧಿಕಾರಿಗಳಿಗೆ ಸನ್ಮಾನ ಹಾಗೂ ಗಿಡ ನೆಡುವ ಕಾರ್ಯಕ್ಕೂ ಅಪ್ಪು ಅಭಿಮಾನಿಗಳು ಮುಂದಾದರು.
ಇದನ್ನೂ ಓದಿ: ಗಂಧದ ಗುಡಿ ರಿಲೀಸ್: ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ