ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಭ್ಯರ್ಥಿಯೊಬ್ಬರು ವಿಶೇಷವಾಗಿ ಮತಯಾಚನೆ ಮಾಡುತ್ತಿದ್ದಾರೆ. ಗ್ರಾಪಂ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಅಭ್ಯರ್ಥಿ ದೇವರಲ್ಲಿ ಹರಕೆ ಹೊತ್ತಿದ್ದಾರೆ. ಚುನಾವಣೆ ಗೆಲುವಿಗಾಗಿ ಏಕಾಂಗಿ ಪ್ರಚಾರ ಮಾಡುತ್ತಿದ್ದಾರೆ..
ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಡಿ. 22ರಂದು ನಡೆಯಲಿದೆ. ಮೂಡಿಗೆರೆ ತಾಲೂಕಿನ ನಿಡುವಾಳೆ ಕ್ಷೇತ್ರದಿಂದ ಗ್ರಾಮ ಪಂಚಾಯತ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರೆಕೊಡಿಗೆ ಸಮೀಪದ ಸುಕ್ಲು ಮಕ್ಕಿಯ ನವೀನ್ ಹಾವಳಿ ಎಂಬುವರು ನಿಡುವಾಳೆ ಕ್ಷೇತ್ರದಲ್ಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚುನಾವಣೆಗೆ ನಾಮ ಪತ್ರ ಸಲ್ಲಿಸುವ ಮೂರು ತಿಂಗಳ ಮೊದಲೇ ಮಂಗಳೂರಿನ ದೇವಸ್ಥಾನವೊಂದರಲ್ಲಿ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕಲ್ಲ ಎಂದು ಹರಕೆ ಹೊತ್ತಿದ್ದು, ಬರಿಗಾಲಿನಲ್ಲಿ ಏಕಾಂಗಿಯಾಗಿ ಮತಯಾಚಿಸುತ್ತಿದ್ದಾರೆ.
ಮತದಾರನಿಂದ ಒಂದು ಹಿಡಿ ಅಕ್ಕಿ ಪಡೆದು ಮತಯಾಚನೆ ಮಾಡುತ್ತಿದ್ದು, ಮನೆ ಮನೆಗಳಲ್ಲಿ ಮತದಾರ ನೀಡಿದ ಅಕ್ಕಿಯಿಂದಲೇ ಊಟ ಮಾಡಿ, ಚಪ್ಪಲಿಯನ್ನು ತಮ್ಮ ಚಿಹ್ನೆಯಾಗಿ ಪಡೆದಿದ್ದಾರೆ. ಈ ಗ್ರಾಪಂ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕಲ್ಲ ಎಂದು ಹರಕೆ ಹೊತ್ತು ಬರಿಗಾಲಿನಲ್ಲೇ ಏಕಾಂಗಿಯಾಗಿ ಮತಯಾಚನೆ ಮೂಲಕ ನವೀನ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 25 ರಂದು ಚಿಕ್ಕಮಗಳೂರಿಗೆ ಆಗಮಿಸಲಿರುವ ಸಿಎಂ ಯಡಿಯೂರಪ್ಪ
ಬೆಂಬಲಿಗರನ್ನು ಕರೆದುಕೊಂಡು ಹೋಗದೇ ಏಕಾಂಗಿಯಾಗಿ ಚಿಕ್ಕ ಚಪ್ಪಲಿಯನ್ನು ತನ್ನ ಬ್ಯಾಗಿಗೆ ಸಿಕ್ಕಿಸಿಕೊಂಡು ಏಕಾಂಗಿಯಾಗಿ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.
'ನಾನು ಚುನಾವಣೆಯಲ್ಲಿ ಗೆದ್ರೆ ಮೊದಲು ಬಡವರ ಪರ ಕೆಲಸ ಮಾಡುತ್ತೇನೆ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ಚಪ್ಪಲಿ ಬಿಟ್ಟು ಹರಕೆ ಹೊತ್ತುಕೊಂಡಿದ್ದಾರಂತೆ. ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಲ್ಲ. ಚುನಾವಣೆಗೆ ಹಣ, ಹೆಂಡ ಹಂಚದೆ, ಪ್ರಚಾರಕ್ಕೆ ಜನರನ್ನು ಬಳಸಿಕೊಳ್ಳದೇ ಏಕಾಂಗಿಯಾಗಿ ಮತಯಾಚಿಸುತ್ತಿದ್ದೇನೆ. ತೋಟದಲ್ಲಿ, ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕಡೆಗಳಲ್ಲಿ ಹೋಗಿ ಮತಯಾಚಿಸುತ್ತಿದ್ದೇನೆ' ಅಂತಾರೆ ನವೀನ್.