ETV Bharat / state

ಈಜು ಬಾರದಿದ್ರು ಭದ್ರಾ ನದಿಗೆ ಹಾರಿ ಬಾಲಕನ ರಕ್ಷಿಸಿದ ಫೋಟೋಗ್ರಾಫರ್​​!

author img

By

Published : Nov 6, 2019, 12:02 PM IST

ಕಳಸ ಸಮೀಪದಲ್ಲಿ ಹರಿಯುವ ಭದ್ರಾ ನದಿಯಲ್ಲಿ ಬಾಲಕನೋರ್ವ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ಕಂಡ ಛಾಯಾಗ್ರಾಹಕನೋರ್ವ ತನಗೆ ಈಜು ಬಾರದಿದ್ದರೂ ಸಹ ನೀರಿಗೆ ಹಾರಿ ಬಾಲಕನನ್ನು ರಕ್ಷಿಸಿದ್ದಾನೆ.

ಬಾಲಕನನ್ನು ರಕ್ಷಿಸುತ್ತಿರುವ ಛಾಯಾಗ್ರಾಹಕ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹರಿಯುವ ಭದ್ರಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನ್ನು ಛಾಯಾಗ್ರಾಹಕನೋರ್ವ ನೀರಿಗಿಳಿದು ರಕ್ಷಣೆ ಮಾಡಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹರಿಯುವ ಭದ್ರಾ ನದಿಯ ಅಂಬುತೀರ್ಥದ ಬಳಿ ಈ ಘಟನೆ ನಡೆದಿದೆ. ಭಾನುವಾರದಂದು ಮದುವೆಯ ಪ್ರೀ ವೆಡ್ಡಿಂಗ್ ಶೂಟ್​ಗಾಗಿ ಕಳಸಕ್ಕೆ ಬೆಂಗಳೂರಿನ ಮೂಲದವರು ಬಂದು ಪೋಟೋ ಸೆರೆ ಹಿಡಿಯುತ್ತಿದ್ದರು. ಪೋಷಕರ ಜೊತೆಯಲ್ಲಿಯೇ ಬಂದಿದ್ದ ಮಗುವೊಂದು ಪೋಷಕರ ಗಮನಕ್ಕೆ ಬಾರದ ಹಾಗೆ ಭದ್ರಾ ನದಿಯಲ್ಲಿ ಇಳಿದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.

ಬಾಲಕನನ್ನು ರಕ್ಷಿಸುತ್ತಿರುವ ಛಾಯಾಗ್ರಾಹಕ

ಇದನ್ನು ನೋಡಿದ ಛಾಯಾಗ್ರಾಹಕ, ಮಗುವಿನ ರಕ್ಷಣೆಗೆ ಧಾವಿಸಿ ನೀರಿಗೆ ಹಾರಿದ್ದಾನೆ. ಆದರೆ ಪೋಟೋಗ್ರಾಫರ್​ಗೆ ಕೂಡ ಈಜು ಬಾರದ್ದರಿಂದ ಆತನು ಸಹ ಕೊಚ್ಚಿ ಹೋಗಿದ್ದ. ನಂತರ ಹೇಗೋ ಹರಸಾಹಸಪಟ್ಟು ಮಗುವನ್ನು ಹಿಡಿದು ನದಿಯ ಮಧ್ಯದಲ್ಲಿದ್ದ ಬಂಡೆ ಹಿಡಿದು ನಿಂತಿದ್ದಾನೆ. ನಂತರ ಸಹಾಯಕ್ಕಾಗಿ ಫೋಟೋಗ್ರಾಫರ್ ಕೂಗಿದ್ದು, ಕೂಡಲೇ ಅಲ್ಲಿದ್ದವರು ಕ್ಯಾಮರಾ ಟ್ರೈಪಾಡ್ ಹಾಗೂ ಮರದ ಕೋಲುಗಳನ್ನು ನೀಡಿ ಮಗು ಹಾಗೂ ಫೋಟೋಗ್ರಾಫರ್​ನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Intro:Kn_Ckm_03_Balakana Rakshane_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹರಿಯುವ ಭದ್ರಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನ್ನು ಛಾಯಗ್ರಾಹಕ ನೀರಿಗೆ ಬಿದ್ದು ರಕ್ಷಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹರಿಯುವ ಭದ್ರಾ ನದಿಯ ಅಂಭಾತೀರ್ಥದ ಬಳಿ ಈ ಘಟನೆ ನಡೆದಿದೆ.ಕಳೆದ ಭಾನುವಾರ ಮದುವೆಯ ಫ್ರೀ ವೆಡ್ಡಿಂಗ್ ಗಾಗಿ ಕಳಸಕ್ಕೆ ಬೆಂಗಳೂರಿನ ಮೂಲದವರು ಬಂದೂ ಪೋಟೋ ಗಳನ್ನು ಸೆರೆ ಹಿಡಿಯುತ್ತಿದ್ದರು.ಪೋಷಕರ ಜೊತೆಯಲ್ಲಿಯೇ ಬಂದಿದ್ದ ಮಗು ಪೋಷಕರ ಗಮನಕ್ಕೆ ಬಾರದ ಹಾಗೇ ಭದ್ರಾ ನದಿಯಲ್ಲಿ ಇಳಿದು ಬಿಟ್ಟಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.ಇದನ್ನು ನೋಡಿದ ಪೋಟೋ ಗ್ರಾಫರ್ ಮಗುವಿನ ರಕ್ಷಣೆ ಧಾವಿಸಿ ನೀರಿಗೆ ಹಾರಿದ್ದಾನೆ.ಆದರೇ ಪೋಟೋ ಗ್ರಾಫರ್ ಗೂ ಕೂಡ ಈಜು ಬಾರದೇ ಆತನು ಕೊಚ್ಚಿ ಹೋಗಿದ್ದು ನಂತರ ಹಾಗೋ ಹೀಗೋ ಮಾಡಿ ಮಗುವನ್ನು ಹಿಡಿದು ನದಿಯ ಮಧ್ಯೆಯೇ ಬಂಡೆ ಹಿಡಿದು ನಿಂತಿದ್ದಾನೆ.ನಂತರ ಸಹಾಯಕ್ಕಾಗಿ ಪೋಟೋ ಗ್ರಾಫರ್ ಕೂಗಿದ್ದು ಕೂಡಲೇ ಅಲ್ಲಿದ್ದವರು ಕ್ಯಾಮೇರಾ ಟ್ರೈಪಾಡ್ ಹಾಗೂ ಮರದ ಕೋಲುಗಳನ್ನು ನೀಡಿ ಮಗು ಹಾಗೂ ಪೋಟೋ ಗ್ರಾಫರ್ ನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯನ್ನು ನೋಡಿಯಾದರೂ ನೀರಿನ ಬಳಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋದಾಗ ಜಾಗರೂಕರಾಗಿರಬೇಕು ಎಂದೂ ತಿಳಿಯಬೇಕಿದೆ ಈಜು ಬಾರದೇ ಇದ್ದರೂ ಮಗುವಿನ ಪ್ರಾಣ ಉಳಿಸಲು ಹೋರಾಡಿದ ಈ ಪೋಟೋ ಗ್ರಾಫರ್ ಸಾಧನೆಯನ್ನು ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದು ಕಳಸ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ...

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.