ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ಮಂಜುನಾಥ್ ಎಂಬುವವರು 8 ಲಕ್ಷ ರೂಪಾಯಿ ನೀಡಿ ಮಂಡ್ಯದಿಂದ ಗಗನ್ ಎಂಬ ಹೆಸರಿನ ಎತ್ತು ಖರೀದಿಸಿದ್ದಾರೆ. ಗಗನ್ ಎತ್ತು, ರಾಸುಗಳಲ್ಲೇ ಬೆಸ್ಟ್ ತಳಿಯಾಗಿರೋ ಹಳ್ಳಿಕಾರ್ ತಳಿಗೆ ಸೇರಿದೆ. ಮೈಸೂರಿನಲ್ಲಿದ್ದ ಈ ಎತ್ತನ್ನು ಕಾಫಿನಾಡಿನ ರೈತ ಮಂಜುನಾಥ್ 8 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. ಇದನ್ನು ಹೊಲ ಗದ್ದೆಯಲ್ಲಿ ದುಡಿಸೋದಿಕ್ಕೆ ಇದನ್ನು ಖರೀದಿಸಿಲ್ಲ. ಬದಲಿಗೆ ಅದನ್ನು ಸಾಕಿ, ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಎನ್ನುತ್ತಾರೆ ಮಂಜುನಾಥ್.
ಮಂಜುನಾಥ್‍ಗೆ ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸೋದು ಅಂದ್ರೆ ತುಂಬಾನೇ ಖುಷಿ. ಗಗನ್ ಎತ್ತನ್ನು ಕೂಡ ಸ್ಪರ್ಧೆಗಾಗಿಯೇ ಖರೀದಿಸಿ ತಂದಿದ್ದಾರೆ. ಈ ಎತ್ತನ್ನು ಖರೀದಿ ಮಾಡಲೇಬೇಕು ಎಂದು ಪಣ ತೊಟ್ಟಿದ್ದೆ. 10 ಲಕ್ಷ ಅಂದಿದ್ರು ಖರೀದಿ ಮಾಡ್ತಿದ್ದೆ. ಈಗ ಅದನ್ನು 20 ಲಕ್ಷಕ್ಕೆ ಕೇಳಿದ್ರೂ ಕೊಡಲ್ಲ ಎನ್ನುತ್ತಿದ್ದಾರೆ ರೈತ ಮಂಜುನಾಥ್.
ಇದನ್ನೂ ಓದಿ: ಜಲಚರ ವಿಜ್ಞಾನಕ್ಕೆ ಕೊಡುಗೆ: ಸುಬ್ಬಣ್ಣ ಅಯ್ಯಪ್ಪನ್ರಿಗೆ ಸಂದ ಪದ್ಮಶ್ರೀ ಗೌರವ