ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಗೋಣಿಬೀಡು ಹೋಬಳಿ ಜನ್ನಾಪುರದ ಕರುಣಾಕರ ಎಂಬುವರ ಅಂಗಡಿಯಲ್ಲಿ 48 ಲೀಟರ್ ಹಾಲು ಕಳ್ಳತನ (milk theft case) ಮಾಡಲಾಗಿದ್ದು, ಈ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಂದು ಬೆಳಗ್ಗೆ 4 ಗಂಟೆ ಸಮಯದಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಮೂಡಿಗೆರೆಯಿಂದ ಬೇಲೂರು ಕಡೆಗೆ ತೆರಳುವ ರಸ್ತೆಯಲ್ಲಿ ಕಾರೊಂದರಲ್ಲಿ ಬಂದ ಕಳ್ಳರು, 48 ಲೀಟರ್ ಹಾಲು ಕಳ್ಳತನ (milk theft case) ಮಾಡಿದ್ದಾರೆ.
ಇತ್ತೀಚೆಗೆ ಕೊಟ್ಟಿಗೆಹಾರದಲ್ಲೂ ಹಾಲು ಕಳ್ಳತನವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಬೆಳಗಿನಜಾವದ ಸಮಯದಲ್ಲೇ ಕಳ್ಳತನ ನಡೆಯುತ್ತಿವೆ. ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು.. ಭಾವಿ ಪತಿಯಿಂದಲೇ ಕಿರುಕುಳ?