ಚಿಕ್ಕಮಗಳೂರು : ಜಿಲ್ಲೆಯಲ್ಲಿಂದು 238 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4,962 ಕ್ಕೆ ಏರಿಕೆಯಾಗಿದೆ.
ಇಂದಿನ ಕೋವಿಡ್ ಪ್ರಕರಣಗಳು:
ಚಿಕ್ಕಮಗಳೂರು ತಾಲೂಕಿನಲ್ಲಿ 70, ಕಡೂರು ತಾಲೂಕಿನಲ್ಲಿ 64, ತರೀಕೆರೆ ತಾಲೂಕಿನಲ್ಲಿ 65, ಮೂಡಿಗೆರೆ ತಾಲೂಕಿನಲ್ಲಿ 12, ಶೃಂಗೇರಿ ತಾಲೂಕಿನಲ್ಲಿ 13, ಕೊಪ್ಪ ತಾಲ್ಲೂಕಿನಲ್ಲಿ 03, ಎನ್ಆರ್ ಪುರ್ ತಾಲೂಕಿನಲ್ಲಿ 11 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಮೃತರ ಮಾಹಿತಿ:
ಈ ದಿನ ಸೋಂಕಿಗೆ ನಾಲ್ಕು ಜನರು ಬಲಿಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 85ಕ್ಕೆ ಏರಿಕೆಯಾಗಿದೆ.
ಗುಣಮುಖ:
ಇಂದು ಕೊರೊನಾ ಸೋಂಕಿನಿಂದ 117 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 3,308 ಜನರು ಸೋಂಕಿತರು ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 1,569 ಸಕ್ರಿಯ ಪ್ರಕರಣಗಳಿವೆ.
ಈ ದಿನ ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ, ಏರಿಯಾವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ.