ETV Bharat / state

ಮರುಪಾವತಿಯಾಗದ ಸಾಲ; 200 ಎಕರೆ ಕಾಫಿ ತೋಟ ಮುಟ್ಟುಗೋಲು - coffee land seize news

ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆಯಲ್ಲಿರುವ ರಮೇಶ್ ರಾವ್ ಎಂಬುವರಿಗೆ ಸೇರಿದ 200 ಎಕರೆ ಕಾಫಿ ತೋಟವನ್ನು ಯೂನಿಯನ್ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ.

chikkamagaluru
ಕಾಫಿ ತೋಟ ಮುಟ್ಟುಗೋಲು
author img

By

Published : Feb 11, 2021, 8:13 PM IST

ಚಿಕ್ಕಮಗಳೂರು: ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರ 200 ಎಕರೆ ಕಾಫಿ ತೋಟವನ್ನು ಯೂನಿಯನ್ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ.

ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆಯಲ್ಲಿರುವ ರಮೇಶ್ ರಾವ್ ಎಂಬುವರಿಗೆ ಸೇರಿದ ವಾಟೇಖಾನ್ ಕಾಫಿ ಎಸ್ಟೇಟ್​ನ್ನು ಸೀಜ್​ ಮಾಡಲಾಗಿದೆ.

ಕಾಫಿ ತೋಟ ಮುಟ್ಟುಗೋಲು

22 ಕೋಟಿ ರೂ. ಸಾಲ ಮರುಪಾವತಿಗೆ ವಿಫಲವಾಗಿದ್ದರಿಂದ ಎಸ್ಟೇಟ್ ಸೀಜ್ ಮಾಡಲಾಗಿದ್ದು, ಪೊಲೀಸರೊಂದಿಗೆ ಬ್ಯಾಂಕ್ ಸಿಬ್ಬಂದಿ ತೆರಳಿ ವಶಪಡಿಸಿಕೊಂಡಿದ್ದಾರೆ. ಕಾರ್ಮಿಕರಿಗೂ ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡಿರುವ ಆರೋಪ ಕಾಫಿ ತೋಟದ ಮಾಲೀಕನ ಮೇಲೆ ಕೇಳಿ ಬರುತ್ತಿದ್ದು, ನಾವು ಕಾಫಿ ತೋಟದಿಂದ ತೆರಳುವುದಿಲ್ಲವೆಂದು ತೋಟದ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ಕಾಫಿ ತೋಟದಲ್ಲಿ 50 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ದಯವಿಟ್ಟು, ನಮ್ಮನ್ನು ಹೊರಕಳಿಸಬೇಡಿ ಅಂತ ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರ ಬಳಿ ಕಾರ್ಮಿಕರು ಮನವಿ ಮಾಡಿದ್ದಾರೆ. ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕೂಡ ಕಲ್ಪಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.