ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ 1 ತಲೆ, 8 ಕಾಲು, 2 ದೇಹ, ಇರುವಂತಹ ವಿಚಿತ್ರ ಕುರಿ ಮರಿ ಜನನವಾಗಿದೆ. ಆದ್ರೆ ದುರಾದೃಷ್ಟ ಎಂಬಂತೆ ಜನಿಸಿದ ಒಂದೇ ಗಂಟೆಯಲ್ಲಿ ಅದು ಅಸುನೀಗಿದೆ.
ಕೇದಿಗೆರೆ ಗ್ರಾಮದ ಈಶಣ್ಣ ಎಂಬುವರ ಮನೆಯಲ್ಲಿ ಈ ವಿಚಿತ್ರ ಕುರಿ ಮರಿ ಜನಿಸಿದ್ದು, 30 ಕುರಿಗಳನ್ನು ಸಾಕಿರುವ ಈಶಣ್ಣ ಇದೇ ಮೊದಲ ಬಾರಿಗೆ ಈ ತರಹದ ಕುರಿ ಮರಿ ಜನಿಸಿದೆ ಎಂದು ಹೇಳಿದರು. ಈ ರೀತಿ ವಿಸ್ಮಯಕಾರಿಯಾಗಿ ಹುಟ್ಟಿದ ಕುರಿ ಮರಿ ನೋಡಲು ಅಕ್ಕ ಪಕ್ಕದ ಹಳ್ಳಿಗಳಿಂದ ಜನ ಬಂದಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ ಹಾವಳಿ