ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು 17 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 70ಕ್ಕೆ ಏರಿದೆ. ಅದರಲ್ಲಿ 35 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ತರೀಕೆರೆ ತಾಲೂಕಿನ ಅಜ್ಜಂಪುರ ಮೂಲದ ವೃದ್ಧೆಯೊಬ್ಬರು ಕೊರೊನಾಗೆ ಸಾವನ್ನಪ್ಪಿದ್ದು, 34 ಸಕ್ರಿಯ ಪ್ರಕರಣಗಳಿವೆ.
ಚಿಕ್ಕಮಗಳೂರು ತಾಲೂಕಿನ ಇಬ್ಬರು, ಕಡೂರಿನ ಒಬ್ಬರು, ತರೀಕೆರೆಯ 14 ಜನರಿಗೆ ಸೋಂಕು ಹರಡಿದೆ. ಸೋಂಕಿತರು ವಾಸ ಮಾಡುತ್ತಿದ್ದ ಪ್ರದೇಶವನ್ನು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೀಲ್ ಡೌನ್ ಮಾಡಿ, ಕಟ್ಟೆಚ್ಚರ ವಹಿಸಿವೆ.