ಚಿಕ್ಕಮಗಳೂರು: ವಿಶ್ವಾದ್ಯಂತ ಹರಡಿರುವ ಕೊರೊನಾ ವೈರಸ್ನಿಂದ ದೇಶಕ್ಕೆ ಸಂಕಷ್ಟ ಒದಗಿ ಬಂದಿದೆ. ಅದರ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಶೃಂಗೇರಿ ಮಠದಿಂದ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ.
ಶೃಂಗೇರಿ ಮಠದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಹಾಗೂ ಬೆಂಗಳೂರಿನ ಸಿಐಐಆರ್ಸಿ ಸಿಬ್ಬಂದಿ ತಮ್ಮ ತಿಂಗಳ ಸಂಭಾವನೆಯಲ್ಲಿ ಗರಿಷ್ಠ ಮೊತ್ತವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಅಲ್ಲದೇ, ಈ ಹಿಂದೆಯೂ ಸಹ ಬರ, ನೆರೆ ಬಂದ ಸಂದರ್ಭದಲ್ಲೂ ಮಠದ ಎಲ್ಲ ಸಿಬ್ಬಂದಿ ದೇಣಿಗೆ ನೀಡಿದ್ದರು.
![10 lakh donation from Sringeri Math to Prime Minister's Relief Fund](https://etvbharatimages.akamaized.net/etvbharat/prod-images/kn-ckm-07-srungeri-mata-help-av-7202347_18042020175048_1804f_1587212448_706.jpg)
ಮಠದ ವತಿಯಿಂದ ನಿತ್ಯ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ ಮಠದ ವಾಹನಗಳ ಮೂಲಕವೇ ಅಗತ್ಯ ಇರುವವರಿಗೆ ತಲುಪಿಸಲಾಗುತ್ತದೆ ಎಂದು ಶೃಂಗೇರಿ ಮಠದ ಆಡಳಿತ ಅಧಿಕಾರಿ ವಿ.ಆರ್.ಗೌರಿಶಂಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.