ಚಿಕ್ಕಬಳ್ಳಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಜೀವನದಲ್ಲಿ ಬೇಸತ್ತು ಕ್ವಾರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಹೊರವಲಯದಲ್ಲಿ ನಡೆದಿದೆ.
ಚೆನ್ನಬೈರನಹಳ್ಳಿ ನಿವಾಸಿ ಗಂಗರಾಜು(25) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. 2 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈತ, ಶಸ್ತ್ರ ಚಿಕಿತ್ಸೆ ನಂತರವೂ ಚೇತರಿಕೆ ಕಾಣದೆ ಕುಗ್ಗಿ ಹೋಗಿದ್ದ. ಸದ್ಯ ಜೀವನದಲ್ಲಿ ಜಿಗುಪ್ಸೆಗೊಂಡು ನಿನ್ನೆ ರಾತ್ರಿ ಮನೆಯಿಂದ ಬಂದು ಗೌರಿಬಿದನೂರು ನಗರ ಹೊರವಲಯದಲ್ಲಿರುವ ಕಲ್ಲುನಾಥೇಶ್ವರ ದೇವಸ್ಥಾನದ ಬಳಿಯ ಕ್ವಾರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಯುವಕನ ಮೃತದೇಹ ಪತ್ತೆಯಾಗದ ಕಾರಣ ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಗೌರಿಬಿದನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.