ಚಿಕ್ಕಬಳ್ಳಾಪುರ: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಸಾವಿಗೆ ಪ್ರೇಯಸಿಯ ಕುಟುಂಬದವರೇ ಕಾರಣ ಎಂದು ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ತಿರ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಿರ್ನಹಳ್ಳಿ ಗ್ರಾಮದ ಕಿಶೋರ್ (25) ವಿಷ ಸೇವಿಸುತ್ತಾ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದಿರುವ ಯುವಕ. ಈತ ಕಳೆದೊಂದು ವರ್ಷದಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಈ ವಿಚಾರ ಆಕೆಯ ಕುಟುಂಬದವರಿಗೆ ತಿಳಿದು ವಿರೋಧ ವ್ಯಕ್ತವಾಗಿತ್ತು.
ನಮ್ಮ ಪ್ರೀತಿ ವಿಚಾರ ತಿಳಿದು, ಯುವತಿಯ ಮನೆಯವರು ತನಗೆ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ನಾನು ವಿಷ ಸೇವಿಸುತ್ತಿದ್ದು, ನನ್ನ ಸಾವಿಗೆ ಅವರ ಮನೆಯವರೇ ಕಾರಣ ಎಂದು ಬರೆದಿಟ್ಟ ಕಿಶೋರ್, ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: 2 ರಾಜ್ಯ, 2 ಧರ್ಮ, ಆನ್‌ಲೈನ್ ಪರಿಚಯ, ಪ್ರೀತಿಸಿ ಮದುವೆ: ಕ್ಲೈಮಾಕ್ಸ್‌ನಲ್ಲಿ ಯುವಕನಿಗೆ ಫಜೀತಿ!
ಸದ್ಯ ಯುವಕನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.