ಚಿಕ್ಕಬಳ್ಳಾಪುರ: ಜಿಲ್ಲೆಯ ಮಲಗೂರು ಗ್ರಾಮದ ರೈತ ಮಂಜುನಾಥ್ ತಮ್ಮ ಟ್ರಾಕ್ಟರ್ಗೆ ಬಾಗೇಪಲ್ಲಿ ತಾಲೂಕಿನ ಗುಂಡ್ಲಪಲ್ಲಿ ಸುಧನ್ವ ಸರ್ವಿಸ್ ಸ್ಟೇಷನ್ನಲ್ಲಿ 2500 ರೂಪಾಯಿ ಡೀಸೆಲ್ ಹಾಕಿಸಿದ್ದರು.
ಆದರೆ ಇದರಲ್ಲಿ 3 ಲೀಟರ್ನಷ್ಟು ನೀರು ಮಿಶ್ರಿತವಾಗಿದ್ದು, ಒಂದು ವಾರದ ಹಿಂದೆ ಉಳುಮೆ ಮಾಡಲು ಖರೀದಿಸಿದ ಹೊಸ ಟ್ರ್ಯಾಕ್ಟರ್ ನೀರು ಮಿಶ್ರಿತ ಡೀಸೆಲ್ನಿಂದ ಕೆಟ್ಟು ನಿಂತು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸಂಬಂಧ ಬಂಕ್ಗೆ ಧಾವಿಸಿದ ರೈತ ಮಂಜುನಾಥ್ ಬಿಲ್ ಪಡೆದಿದ್ದು ಕಾರ್ಯನಿರ್ವಾಹಕರನ್ನು ಪ್ರಶ್ನಿಸಿದಾಗ ಟ್ರಾಕ್ಟರ್ ಕೆಟ್ಟು ನಿಂತರೇ ನಮಗೇನು ಸಂಬಂಧವಿಲ್ಲವೆಂಬ ಉಡಾಫೆ ಉತ್ತರ ನೀಡಿ ಬೆದರಿಕೆಯನ್ನು ಹಾಕಿದ್ದಾರೆ. ಇನ್ನೂ ಮಂಜುನಾಥ್ ದಿಕ್ಕು ತೋಚದೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಕರೆಮಾಡಿ ಅಳಲು ತೋಡಿಕೊಂಡಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.