ಚಿಕ್ಕಬಳ್ಳಾಪುರ: ಬಾಗೇಪಲ್ಲಿಯ ಗ್ರೀನ್ ಡಾಬಾದ ಹಿಂಭಾಗದಲ್ಲಿ ಮರಣೋತ್ತರ ಪರೀಕ್ಷೆಗೂ ಸಾಧ್ಯವಾಗದ ರೂಪದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.
ರಾಷ್ಟೀಯ ಹೆದ್ದಾರಿ 7ರ ಪಕ್ಕ ಇರುವ ಗ್ರೀನ್ ಡಾಬಾದ ಹಿಂಬದಿಯಲ್ಲಿ ಗುರುತಿಗೆ ಸಿಗದ ರೀತಿಯಲ್ಲಿ ಶವವೊಂದು ಪತ್ತೆಯಾಗಿದೆ. ಸುಮಾರು 45 ವರ್ಷದ ಪುರುಷನ ದೇಹ ಇದಾಗಿದೆ ಎಂದು ಊಹಿಸಲಾಗಿದೆ. ದೇಹದ ಶೇಕಡಾ 90ರಷ್ಟು ಭಾಗ ಪ್ರಾಣಿಗಳು ತಿಂದಿದ್ದು, ಇನ್ನು ಶೇ. 10ರಷ್ಟು ಮಾತ್ರ ಉಳಿದಿದೆ.
ದೇಹದ ಎಡಗೈ ತೋಳಿನ ಮೇಲೆ ಓಂ ಗುರುತಿನ ಹಚ್ಚೆ ಇದ್ದು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಂದು ಬಣ್ಣದ ಬೆಲ್ಟ್ ಧರಿಸಿರುವುದನ್ನು ಮಾತ್ರ ಗುರುತಿಸಬಹುದಾಗಿದೆ.
ಕುರಿ ಮೇಯಿಸಲು ಗ್ರೀನ್ ಡಾಬಾದ ಹಿಂಬದಿ ಹೋದವರು ಶವವನ್ನು ಕಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.