ಚಿಕ್ಕಬಳ್ಳಾಪುರ : ಹೈಫೈ ಜೀವನ ನಡೆಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು, ಅವರಿಂದ ಐದು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬ ಮುಖ್ಯ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜೌಗುಪೇಟೆಯ ವಾಸಿ ರಾಕೇಶ್ ಎಂಬಾತನ ಬೈಕ್ ಕಳುವಾಗಿದ್ದು, ಶಿಡ್ಲಘಟ್ಟ ನಗರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ದೂರು ದಾಖಲು ಮಾಡಿಕೊಂಡ ಪೊಲೀಸರು ಕಳ್ಳರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು.
ಠಾಣೆಯ ಅಪರಾಧ ವಿಭಾಗದ ಎಸ್‍ಐ ಪದ್ಮಾವತಮ್ಮ ನೇತೃತ್ವದ ತಂಡವು ದೇವನಹಳ್ಳಿ ತಾಲೂಕು ರೆಡ್ಡಿಹಳ್ಳಿಯ ಕುಶಾಂತ್ ಹಾಗೂ ಚಿಕ್ಕಬಳ್ಳಾಪುರ ತಾಲೂಕು ನೆಲಮಾಕನಹಳ್ಳಿಯ ಸಾಗರ್ ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೊಬ್ಬ ಪ್ರಮುಖ ಆರೋಪಿ ನಾಗರಬಾವಿಯ ಮದನ್ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೂ ಆರೋಪಿಗಳಿಂದ ಸುಮಾರು 5 ಲಕ್ಷ ಬೆಲೆಯ 5 ಬೈಕ್‍ಗಳನ್ನು ವಶಕ್ಕೆ ತೆಗೆದುಕೊಂಡು ಬಂಧಿತ ಸಾಗರ್ ಹಾಗೂ ಕುಶಾಂತ್ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.