ಚಿಕ್ಕಬಳ್ಳಾಪುರ : ಮಂಕಿಪಾಕ್ಸ್ ರೋಗಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ, ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಒಬ್ಬ ವ್ಯಕ್ತಿಗೆ ರೋಗಲಕ್ಷಣಗಳು ಇರುವ ಅನುಮಾನ ಇರುವುದರಿಂದ ವ್ಯಕ್ತಿಯ ಸ್ಯಾಂಪಲ್ಸ್ಅನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಮಾಹಿತಿ ನೀಡಲಾಗುವುದು. ಆದರೆ ಮಂಕಿಪಾಕ್ಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಮಂಕಿಪಾಕ್ಸ್ ಬಂದ ತಕ್ಷಣ ಸಾವಾಗುತ್ತೆ ಎಂಬ ಆತಂಕ ಬೇಡ. ಮಂಕಿಪಾಕ್ಸ್ ನಿಂದ ಸಾವಾಗುವುದು ಅನಿರೀಕ್ಷಿತ. ವ್ಯಾಕ್ಸಿನ್ ಪಡೆದುಕೊಂಡವರಿಗೆ ರೋಗಲಕ್ಷಣಗಳು ಕಂಡುಬರಲ್ಲ. ಪಡೆದುಕೊಳ್ಳದೆ ಇರುವವರಲ್ಲಿ ಕೆಲವು ಲಕ್ಷಣಗಳು ಕಂಡು ಬಂದಿವೆ. ಇದು ಮಾರಣಾಂತಿಕ ಕಾಯಿಲೆ ಅಲ್ಲದಿರುವುದರಿಂದ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದರು.
ಓದಿ : ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ: ಎಬಿವಿಪಿಯ 30 ಜನರ ವಿರುದ್ಧ ಎಫ್ಐಆರ್, ಇಬ್ಬರು ಪಿಎಸ್ಐ ಅಮಾನತು