ETV Bharat / state

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ರಂಗಭೂಮಿ ಕಲಾವಿದೆ ಯಶೋದಮ್ಮ ಆಯ್ಕೆ

author img

By

Published : Jul 20, 2019, 4:53 AM IST

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕಿರುತೆರೆ, ಚಲನಚಿತ್ರ, ಮತ್ತು ರಂಗಭೂಮಿ ಕಲಾವಿದೆ ವಿ. ಯಶೋದಮ್ಮರವರನ್ನು ಆಯ್ಕೆ ಮಾಡಲಾಗಿದೆ.

ರಂಗಭೂಮಿ ಕಲಾವಿದೆ ಯಶೋದಮ್ಮ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿ. ಯಶೋದಮ್ಮರವರನ್ನು ಆಯ್ಕೆ ಮಾಡಲಾಯಿತು.

ವಿ. ಯಶೋದಮ್ಮರವರು ಕಿರುತೆರೆ, ಚಲನಚಿತ್ರ, ಮತ್ತು ರಂಗಭೂಮಿ ಕಲಾವಿದೆ. ಇವರು 2018ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು 2017ರಲ್ಲಿ ನಾಡಪ್ರಭು ಕನ್ನಡ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ರಂಗಭೂಮಿಯಲ್ಲಿ ಸುಮಾರು 45 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಯಶೋದಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದಲ್ಲದೆ, ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಯಶೋದಮ್ಮರವರು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮದ ವೆಂಕಟರಾಯಪ್ಪ ಮತ್ತು ಕೆಂಪಮ್ಮ ದಂಪತಿಗಳ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ದೇವರಮಳ್ಳೂರು ಹಾಗೂ ಪ್ರೌಢ ಶಿಕ್ಷಣವನ್ನು ಶಿಡ್ಲಘಟ್ಟ ನಗರದಲ್ಲಿ ಪೂರೈಸಿ ಬಳಿಕ ಚಿಂತಾಮಣಿ ಮುನ್ಸಿಪಾಲ್ ಕಾಲೇಜಿನಲ್ಲಿ ಬಿಎ , ಹಿಂದಿ , ಸಂಸ್ಕೃತ ಕಾವ್ಯಗಳಲ್ಲಿ ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ. ಗೋರೂರು ಚೆನ್ನಬಸಪ್ಪನವರ ಬೆಳ್ಳಕ್ಕಿ ಹಿಂಡು ಬೇದರ್ಯಾವು, ಸಂಗ್ಯಾ ಬಾಳ್ಯಾ, ಸಿದ್ದನಗೌಡ ಪಾಟೀಲರ ಬೀದಿನಾಟಕಗಳು, ಶ್ರೀಮತಿ ನಾಗರತ್ನಮ್ಮರವರೊಂದಿಗಿನ ಶ್ರೀಕೃಷ್ಣಗಾರುಡಿ ಸೇರಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ರಂಗಗೀತೆ, ಜಾನಪದ ಗೀತೆ, ಚಲನಚಿತ್ರ ಗೀತೆ, ಭಾವಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೆಲವು ಪಾರಿತೋಷಕಗಳನ್ನು ಪಡೆದಿರುತ್ತಾರೆ. ನಾಟಕ ಅಭಿನಯದಲ್ಲಿ ಅತ್ಯಂತ ಅನುಭವಿಯಾಗಿದ್ದು, ಸತತವಾಗಿ ರಂಗಭೂಮಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾರೆ.

ಯಶೋದಮ್ಮರಿಗೆ ಬಂದಿರುವ ಪ್ರಶಸ್ತಿಗಳು:

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಮಿಸಸ್ ಇಂಡಿಯಾ ಕರ್ನಾಟಕ ರನ್ನರ್ ಆಫ್ ಪ್ರಶಸ್ತಿ, ಮಾನಸ ಕಲಾರಂಗ ಪ್ರಶಸ್ತಿ, ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಇವರು ರಾಮಾಯಣ ಸಂಸ್ಕೃತ ನಾಟಕ, ಕೆರೆಗೆ ಹಾರ, ಬೀದಿನಾಟಕಗಳು, ಅಭಿಜ್ಞಾನ ಶಾಕುಂತಲ, ಆಯ್ಯನ ಕೆರೆ ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಧಾರವಾಹಿಗಳಲ್ಲಿಯೂ ಭಾಗವಹಿದ್ದು, ಅವುಗಳೆಂದರೆ ಕೂಡಿ ಬಾಳೋಣ, ನೋಡಿ ಬಾ ನಮ್ಮೂರ, ದಿಢೀರ್ ದುಡ್ಡು, ಯುಗಾದಿ ಅಳಿಯ, ಸಂಕ್ರಾಂತಿ, ಸುಧಾಕರ ಬಸವಣ್ಣ, ದಂಡಪಿಂಡಗಳು, ಮಾಂಗಲ್ಯ ಗೀತ ಮಾಧುರಿ ,ನಿತ್ಯೋತ್ಸವ. ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದಲ್ಲೂ ತನ್ನ ಛಾಪು ತೋರಿಸಿದ್ದು, ದೋಸ್ತಿ, ಕೂಗು, ಎಕ್ಸ್ಕ್ಯೂಸ್ಮಿ, ಚಪ್ಪಾಳೆ, ಅದ್ವೈತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿರುವ ಟೆಲಿಫಿಲ್ಮ್​ಗಳಲ್ಲೂ ನಟಿಸಿದ್ದಾರೆ.

Intro:nullBody:ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶ್ರೀಮತಿ ಯಶೋದಮ್ಮ ರವಾರನ್ನು ಸರ್ವಾಬು ಮತದಿಂದ ಆಯ್ಕೆ ಮಾಡಲಾಯಿತು .

ಶ್ರೀಮತಿ ವಿ ಯಶೋದಮ್ಮ ರವರು ಕಿರು ತೆರೆ, ಚಲನಚಿತ್ರ, ಮತ್ತು ರಂಗಭೂಮಿ ಕಲಾವಿದರಾಗಿ 2018ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು 2017ರಲ್ಲಿ ನಾಡಪ್ರಭು ಕನ್ನಡ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ರಂಗಭೂಮಿಯಲ್ಲಿ ಸುಮಾರು 45 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಇವರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮದ ವೆಂಕಟರಾಯಪ್ಪ ಮತ್ತು ಕೆಂಪಮ್ಮ ದಂಪತಿಗಳ ಮಗಳಾದ ಶ್ರೀಮತಿ ಯಶೋದಮ್ಮ ರವರು , ಪ್ರಾಥಮಿಕ ಶಾಲೆ ದೇವರಮಳ್ಳೂರು , ಪ್ರೌಢಶಾಲೆ ಯನ್ನು ಶಿಡ್ಲಘಟ್ಟ ನಗರ ಹಾಗೂ ಚಿಂತಾಮಣಿ ಮುನ್ಸಿಪಾಲ್ ಕಾಲೇಜಿನಲ್ಲಿ ಬಿಎ , ಹಿಂದಿ , ಸಂಸ್ಕೃತ ಕಾವ್ಯ ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ.
ಮುಖ್ಯವಾಗಿ ಅಭಿನಯಿಸಿರುವ ನಾಟಕಗಳು ಗೋರೂರು ಚೆನ್ನಬಸಪ್ಪನವರ ಬೆಳ್ಳಕ್ಕಿ ಹಿಂಡು ಬೇದರ್ಯವು, ಸಂಗ್ಯಾ ಬಾಳ್ಯಾ, ಸಿದ್ದನಗೌಡ ಪಾಟೀಲ್ ರ ಬೀದಿನಾಟಕಗಳು ಶ್ರೀಮತಿ ನಾಗರತ್ನಮ್ಮ ರವರೊಂದಿಗೆ ಶ್ರೀಕೃಷ್ಣಗಾರುಡಿ ಇನ್ನು ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ರಂಗಗೀತೆ ಜಾನಪದ ಗೀತೆ ಚಲನಚಿತ್ರ ಗೀತೆ ಭಾವಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೆಲವು ಪಾರಿತೋಷಕಗಳನ್ನು ಪಡೆದಿರುತ್ತಾರೆ ನಾಟಕದ ಅಭಿನಯದಲ್ಲಿ ಅತ್ಯಂತ ಅನುಭವವಿದ್ದು ಸತತವಾಗಿ ರಂಗಭೂಮಿಯನ್ನು ಉಳಿಸಿಕೊಂಡು ಬಂದಿದ್ದಾರೆ.

ಯಶೋದಮ್ಮ ಅವರಿಗೆ ಬಂದಿರುವ ಪ್ರಶಸ್ತಿಗಳು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಮಿಸಸ್ ಇಂಡಿಯಾ ಕರ್ನಾಟಕ ರನ್ನರ್ ಆಫ್ ಪ್ರಶಸ್ತಿ, ಮಾನಸ ಕಲಾರಂಗ ಪ್ರಶಸ್ತಿ, ಸೇರಿದಂತೆ ವಿವಿಧ ಅನೇಕ ಪ್ರಶಸ್ತಿಗಳು ಲಭಿಸಿವೆ, ಏನು ಇವರು ನಟಿಸಿರುವ ಅನೇಕ ನಾಟಕಗಳು ರಾಮಾಯಣ ಸಂಸ್ಕೃತ ನಾಟಕ, ಕೆರೆಗೆಹಾರ, ಬೀದಿನಾಟಕಗಳು, ಅಭಿಜ್ಞಾನ ಶಾಕುಂತಲ,ಆಯ್ಯನ ಕೆರೆ, ಇನ್ನೂ ಮುಂತಾದುವು, ಇವರು ಅಭಿನಯಿಸಿದ ಧಾರವಾಹಿಗಳು ಕೂಡಿ ಬಾಳೋಣ, ನೋಡಿ ಬಾ ನಮ್ಮೂರ, ದಿಢೀರ್ ದುಡ್ಡು ಯುಗಾದಿ ಅಳಿಯ, ಸಂಕ್ರಾಂತಿ, ಸುಧಾಕರ ಬಸವಣ್ಣ, ದಂಡಪಿಂಡಗಳು, ಮಾಂಗಲ್ಯ ಗೀತ ಮಾಧುರಿ ,ನಿತ್ಯೋತ್ಸವ, ಇವರ್ ನಟಿಸಿರುವ ಚಲನಚಿತ್ರ ಗಳು ದೋಸ್ತಿ, ಕೂಗು, ಎಕ್ಸ್ಕ್ಯೂಸ್ಮಿ, ಚಪ್ಪಾಳೆ, ಅದ್ವೈತ, ಇವರು ನಟಿಸಿರುವ ಟೆಲಿಫಿಲ್ಮ್ಸ್ , ಸ್ವರ್ಗದ ಮಡಿಲು, ಲಿಟಲ್ ಸೈಂಟಿಸ್ಟ್, ಸತ್ಯವತಿ, ದ ಚೇಂಜ್, ಭೂಮಿತಾಯಿ, ಇತ್ಯಾದಿ, ಸಾಕ್ಷರತಾ ಬೀದಿ ನಾಟಕಗಳಾದ ಅನಕ್ಷರಸ್ಥರ ಹಳಿಯ, ಒಂದು ರೊಟ್ಟಿ ಹತ್ತು ಕೈ ,ಏನು ಮಾಡಿ ಏನು ಬಂತಣ್ಣ, ಇನ್ನು ಮುಂತಾದ ವೂ...Conclusion:null

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.