ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪ್ರತಿಭಟನೆ ವೇಳೆ ಚಿಂತಾಮಣಿ ಮಾಜಿ ಶಾಸಕ ಎಂ.ಸಿ. ಸುಧಾಕರ್ ಅವರು ಆರೋಗ್ಯ ಸಚಿವ ಕೆ ಸುಧಾಕರ್ ವಿರುದ್ಧ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಆರೋಗ್ಯ ಸಚಿವ ಗರಂ ಆಗಿದ್ದಾರೆ. ನಿಮ್ಮ ಭ್ರಷ್ಟಚಾರವನ್ನೆಲ್ಲಾ ಬಯಲಿಗೆಳೆಯುತ್ತೇನೆಂದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇಷ್ಟು ದಿನ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರದ್ದೇ ಹವಾ ಇತ್ತು, ಈಗ ಇತ್ತೀಚೆಗಷ್ಚೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರು ಕಾಂಗ್ರೆಸ್ ಪ್ರತಿಭಟನೆ ವೇಳೆ ಸಚಿವ ಸುಧಾಕರ್ ಬಗ್ಗೆ ಕುಟುಕಿದ್ದಾರೆ. ಸಚಿವ ಸುಧಾಕರ್ ರಿಪಬ್ಲಿಕ್ ರೂಲಿಂಗ್ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಒಂದೊಂದು ಜಲ್ಲಿಕಲ್ಲು ಸಚಿವ ಸುಧಾಕರ್ ಚಿರಿತ್ರೆಯನ್ನು ಹೇಳುತ್ತವೆ. ಎಲ್ಲದಕ್ಕೂ ಚಿಕ್ಕಬಳ್ಳಾಪುರ ಜನರು ಶೀಘ್ರದಲ್ಲೇ ಅಂತ್ಯ ಹೇಳುತ್ತಾರೆ ಎಂದು ಟಕ್ಕರ್ ಕೊಟ್ಟಿದ್ದಾರೆ.
ಇದರಿಂದ ಕೆರಳಿದ ಸಚಿವ ಸುಧಾಕರ್ ಇಂದು ಎಂ.ಸಿ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹತ್ತು ವರ್ಷ ಯಾಕೆ ನಿಮ್ಮನ್ನು ಸೋಲಿಸಿ ಮನೆಯಲ್ಲಿ ಕೂರಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಎಲ್ಲಾದ್ರು ಹಾಳಾಗೋಗ್ಲಿ ಎಂದು ಸುಮ್ಮನಿದ್ದರೆ, ನನ್ನ ಬಗ್ಗೆ ಮಾತಾಡ್ತೀರಾ? ದೇವಸ್ಥಾನ ಜಾಗಗಳನ್ನು ಬಿಟ್ಟಿಲ್ಲ, ಸರ್ಕಾರಿ ಜಾಗಗಳನ್ನು ಲೂಟಿ ಮಾಡಿದ್ದೀರಿ. ನಾನಾಗಲಿ ನನ್ನ ಕುಟುಂಬಸ್ಥರಾಗಲಿ ಒಂದು ಇಂಚು ಸರ್ಕಾರಿ ಆಸ್ತಿ ಮಾಡಿಕೊಂಡಿದ್ದರೆ ತೋರಿಸಿ ಎಂದು ಸಚಿವ ಸುಧಾಕರ್ ಅವರು ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್ಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಿಂದ ಹೋಗುವ ಒಂದೊಂದು ಜಲ್ಲಿಕಲ್ಲು ಸಚಿವ ಸುಧಾಕರ್ ಹೆಸರು ಹೇಳುತ್ತವೆ: ಕಾಂಗ್ರೆಸ್