ಚಿಕ್ಕಬಳ್ಳಾಪುರ: ಮೊಬೈಲ್ ಖರೀದಿಸಲು ಎಂದು ಶೋರೂಂಗೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳು ನೋಡನೋಡುತ್ತಲೇ ಎರಡು ಮೊಬೈಲ್ ಕದ್ದು ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನಗರದ ಬಿಬಿ ರಸ್ತೆಯ ಬಾಲಾಜಿ ಚಲನಚಿತ್ರ ಮಂದಿರದ ಪಕ್ಕದಲ್ಲಿರುವ ವಿನಾಯಕ ಮೊಬೈಲ್ ಅಂಗಡಿಗೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳು ಸೆಕೆಂಡ್ ಹ್ಯಾಂಡ್ ಮೊಬೈಲ್‌ಗಳನ್ನು ತೋರಿಸುವಂತೆ ಕೇಳಿದ್ದಾರೆ. ಇನ್ನು, ಕೆಲ ದಿನಗಳ ಹಿಂದೆಯೇ ಬಂದಿದ್ದ ಓರ್ವ ವಿದ್ಯಾರ್ಥಿ ಮುಖ ಪರಿಚಯ ಹಿನ್ನೆಲೆ ಮೊಬೈಲ್ ಕೊಟ್ಟು ಬೇರೆ ಗಿರಾಕಿಗಳನ್ನು ನೋಡಿಕೊಳ್ಳಲು ಮಾಲೀಕ ಪಕ್ಕಕ್ಕೆ ಹೋಗಿದ್ದಾರೆ.
ಇದೇ ಅವಕಾಶವನ್ನು ಬಳಸಿಕೊಂಡ ಖತರ್ನಾಕ್ ವಿದ್ಯಾರ್ಥಿಗಳು ಎರಡು ಮೊಬೈಲ್‌ಗಳನ್ನು ಕದ್ದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಮೊಬೈಲ್ ಕದ್ದ ದೃಶ್ಯಾವಳಿ ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ನಗರಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಸರಣಿ ಕಳ್ಳತನ: ಖದೀಮನ ಕೃತ್ಯ ಸಿಸಿಟಿವಿಯಲ್ಲಿ ಸೆರೆ