ETV Bharat / state

ಬೀದಿ ನಾಯಿಗಳ ದಾಳಿಯಿಂದ ಅಣ್ಣ ಸಾವು; ತಮ್ಮನ ಮೇಲೂ ಡೆಡ್ಲಿ ಅಟ್ಯಾಕ್

author img

By

Published : Nov 11, 2022, 7:26 AM IST

ಈ ಹಿಂದೆ ನಾಯಿಗಳ ದಾಳಿಯಿಂದ ಅಣ್ಣ ಮೃತಪಟ್ಟಿದ್ದ. ಈಗ ಮೃತ ಬಾಲಕನ ತಮ್ಮನ ಮೇಲೂ ನಾಯಿಗಳು ದಾಳಿ​ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

stray dogs deadly attack on Boy  deadly attack on Boy in Chikkaballapur  stray dogs deadly attack news  ನಾಯಿಗಳ ದಾಳಿಯಿಂದ ಅಣ್ಣ ಸಾವು  ತಮ್ಮನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ಶ್ವಾನಗಳು  ನಾಯಿಗಳ ದಾಳಿಯಿಂದ ಅಣ್ಣ ಮೃತ  ತಮ್ಮನ ಮೇಲೆಯೂ ಶ್ವಾನಗಳು ಡೆಡ್ಲಿ ಅಟ್ಯಾಕ್​ ಬಾಲಕ ದಸ್ತಗಿರ್ ಮೇಲೆ ನಾಯಿಗಳು ದಾಳಿ  ಬಾಲಕ ದಸ್ತಗೀರ್​ ಗಂಭೀರವಾಗಿ ಗಾಯ  ಬೀದಿ ನಾಯಿಗಳು ಏಕಾಏಕಿ ದಾಳಿ
ತಮ್ಮನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ಶ್ವಾನಗಳು

ಚಿಕ್ಕಬಳ್ಳಾಪುರ: ಒಂದು ವರ್ಷದ ಹಿಂದಷ್ಟೇ ನಾಯಿಗಳ ದಾಳಿಯಿಂದ ಬಾಲಕನೋರ್ವ ಮೃತಪಟ್ಟಿದ್ದ. ಇದೀಗ ಆತನ ತಮ್ಮನ ಮೇಲೂ ಅವುಗಳು ಅಟ್ಯಾಕ್ ಮಾಡಿವೆ. ಈ ಘಟನೆ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಇಲ್ಲಿನ ತೈಬಾ ನಗರದ ನಿವಾಸಿ ಶಬೀರ್ ಹಾಗೂ ಸಲ್ಮಾ ದಂಪತಿಯ ಮಗ ದಸ್ತಗಿರ್​ ಗಂಭೀರವಾಗಿ ಗಾಯಗೊಂಡಿದ್ದಾನೆ.

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ಉಪಟಳ

ಸಂಜೆ ಶಾಲೆ ಮುಗಿದ ಬಳಿಕ ಆಟವಾಡಲು ಮನೆಯಿಂದ ಹೊರಬಂದಾಗ ಬೀದಿ ನಾಯಿಗಳು ಮೈಮೇಲೆ ಎರಗಿವೆ. ನಾಯಿಗಳ ದಂಡು ಬಾಲಕನ ಮೂಗು, ಬಾಯಿ ಕಚ್ಚಿದ್ದು ಗಂಭೀರವಾಗಿ ಗಾಯಗೊಳಿಸಿವೆ. ಇದನ್ನು ಗಮನಿಸಿದ ತಾಯಿ‌ ಸಲ್ಮಾ ಹಾಗೂ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ. ಸದ್ಯ ಬಾಲಕನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪದೇ ಪದೇ ಇಂಥ ಘಟನೆಗಳು ಮರುಕಳಿಸುತ್ತಿದ್ದರೂ ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಉಪಟಳ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ನಾಯಿಗಳನ್ನು ಸೆರೆಹಿಡಿಯಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ರಕ್ಕಸವಾಗ್ತಿರುವ ಬೀದಿ ನಾಯಿಗಳು.. ಶ್ವಾನಗಳ ಅಟ್ಟಹಾಸಕ್ಕೆ ಬಾಲಕ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.