ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಮಂಡಿಸುತ್ತಿರುವ ರಾಜ್ಯ ಬಜೆಟ್ನ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅದರಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದರಿಂದ ಚಿಕ್ಕಬಳ್ಳಾಪುರ ಜನತೆಯ ನಿರೀಕ್ಷೆಗಳು ಗದಿಗೆದರಿವೆ.
ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿ ಆಧಾರಿತ ಪ್ರದೇಶವಾದ್ದರಿಂದ ಪ್ರತಿ ಬಾರಿಯಂತೆ ಈ ಬಾರಿಯೂ ಶಾಶ್ವತ ನೀರಾವರಿ ಯೋಜನೆಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಜೊತೆಗೆ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಗರಿಗೆದರುತ್ತಿವೆ. ಸಮೀಕ್ಷೆಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆ ಬರಡು ಭೂಮಿಯಾದ್ದರಿಂದ ನಿರುದ್ಯೋಗ ತಪ್ಪಿಸಲು ಸ್ಥಳೀಯ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಶಾಶ್ವತ ನೀರಾವರಿ ಯೋಜನೆಗಳು
ಉಭಯ ಜಿಲ್ಲೆಗಳಲ್ಲಿ ಕೃಷಿಯೇ ಮೂಲಾಧಾರವಾದ್ದರಿಂದ ಶಾಶ್ವತ ನೀರಾವರಿ ಯೋಜನೆಗಳಾದ ಎತ್ತಿನಹೊಳೆ, ಕೆಸಿ ವ್ಯಾಲಿ, ಮೇಕೆದಾಟು ಯೋಜನೆಗಳು ತ್ವರಿತಗತಿಯಲ್ಲಿ ಜಾರಿಯಾಗಲಿ ಎಂಬುವುದಕ್ಕೆ ಹೆಚ್ಚು ಒತ್ತನ್ನು ನೀಡಿದ್ದಾರೆ.
ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ
ಬರಪೀಡಿತ ಜಿಲ್ಲೆಯಾದ್ದರಿಂದ ನೀರಿಲ್ಲದೆ ನಿರುದ್ಯೋಗ ಸೃಷ್ಟಿ ಹೆಚ್ಚಾಗಿದೆ. ಇದರಿಂದ ಯುವಜನತೆ, ರೈತರನ್ನು ಗುರಿಯಾಗಿಸಿಕೊಂಡು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.
ರಸ್ತೆಗಳ ಅಭಿವೃದ್ಧಿ ಹಾಗೂ ಡಾಂಬರೀಕರಣ
ಜಿಲ್ಲೆಯ ಮುಖ್ಯ ರಸ್ತೆಗಳು ಬಿಟ್ಟರೆ ಹಳ್ಳಿಗಾಡಿನಲ್ಲಿ ರಸ್ತೆಗಳ ಅಭಿವೃದ್ಧಿ ಕುಠಿತವಾಗಿದೆ. ಇದರಿಂದ ರಸ್ತೆ ಅಭಿವೃದ್ಧಿಯ ಬಗ್ಗೆ ನಿರೀಕ್ಷೆಗಳಿವೆ.
ಕೆರೆಗಳಲ್ಲಿ ಹೂಳೆತ್ತುವ ಕಾರ್ಯ
ಬರಪೀಡಿತ ಜಿಲ್ಲೆಯಲ್ಲಿ ಮಳೆಯಾದರು ಕಡಿಮೆ ಮಟ್ಟದಲ್ಲಿ ಹಾಗೂ ನೀರಾವರಿ ಯೋಜನೆಗಳು ಜಾರಿಯಾಗುವುದಿಂದ ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಬೇಕೆಂಬ ನಿರೀಕ್ಷೆಗಳಿವೆ.
ಹಾಗೆಯೇ ಜಿಲ್ಲೆಯಲ್ಲಿ ಹಲವು ಶಾಲೆಗಳು ಹಳೆಯವಾದ್ದರಿಂದ ಅವುಗಳನ್ನು ಕೆಡವಿ ಹೊಸ ರೂಪ ನೀಡಬೇಕು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಮಾಡಬೇಕೆಂದು ಜನ ಆಗ್ರಹಿಸಿದ್ದಾರೆ.
ಆಸ್ಪತ್ರೆಗಳ ಬಗ್ಗೆ ಕಳಾಜಿವಹಿಸಬೇಕು: ಜಿಲ್ಲೆಯ ಹಲವು ಪ್ರಾಥಮಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ಡಾಕ್ಟರ್ಗಳ ಕೊರತೆಯನ್ನು ಸರಿದೂಗಿಸಬೇಕು.
ಬೆಂಬಲ ಬೆಲೆ ಘೋಷಣೆ: ಇತಿಹಾಸದಲ್ಲೇ ಮಾವಿನ ಬೆಲೆಗೆ ಕಳೆದ ಬಾರಿ ಕಡಿಮೆ ಬೆಲೆ ಬಂದಿರುವುದಕ್ಕೆ ಸುಕ್ತವಾದ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಜೊತೆಗೆ ಹಾಲು ಹಾಗೂ ರೇಷ್ಮೆ ಬೆಳೆಗಳಿಗೂ ಬೆಂಬಲ ಬೆಲೆಯನ್ನು ನಿರೀಕ್ಷೆ ಮಾಡಿದ್ದಾರೆ.
ಕಾಲೇಜುಗಳ ಸ್ಥಾಪನೆ : ರೇಷ್ಮೆ ಕೃಷಿ ವಿದ್ಯಾನಿಲಯ ಸೇರಿದಂತೆ, ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಗಳ ಅವಶ್ಯಕತೆಗಳ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಗಳಿವೆ.