ಚಿಕ್ಕಬಳ್ಳಾಪುರ: ಸರ್. ಎಂ. ವಿಶ್ವೇಶ್ವರಯ್ಯ ದಿನಾಚರಣೆಯನ್ನು ದೇಶದೆಲ್ಲೆಡೆ ಎಂಜಿನಿಯರ್ ದಿನಾಚರಣೆಯನ್ನಾಗಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಸರ್ ಎಂ.ವಿ. ಹುಟ್ಟೂರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿಯೂ ಅವರ ಹುಟ್ಟುಹಬ್ಬದ ಪ್ರಯುಕ್ತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿವರ್ಷದಂತೆ ಈ ವರ್ಷವೂ ಹೂಗಳಿಂದ ಅಲಂಕರಿಸಿದ ಸರ್ ಎಂ. ವಿ. ಪುತ್ಥಳಿ, ಸಮಾಧಿ ಎಲ್ಲರನ್ನು ಆಕರ್ಷಿಸುವಂತಿತ್ತು. ದೇಶಿಯ, ವಿದೇಶಿಯ ಬಗೆ ಬಗೆಯ ಹೂಗಳಿಂದ ಅಲಂಕಾರ ಮಾಡಿದ್ದು ಕಣ್ಮನ ಸೆಳೆಯುವಂತಿತ್ತು. ಇನ್ನೂ ಜಿಲ್ಲೆಯ ಸಿಇಓ ಫೌಝಿಜಾ ತುರನಂ ಸರ್ ಎಂ.ವಿ ಸಮಾಧಿ ಹತ್ತಿರ ಆಗಮಿಸಿ ಪುತ್ಥಳಿಗೆ ನಮಿಸಿದರು.
ಇನ್ನೂ ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಯುವಜನತೆ, ಪ್ರವಾಸಿಗರು ಸರ್. ಎಂ.ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಗಂಟೆಗಟ್ಟಲೆ ಕ್ಯೂ ನಿಂತು ಸೆಲ್ಫಿಗಳಿಗೆ ಪೋಸ್ ನೀಡಿ ನಮನ ಅರ್ಪಿಸಿದರು. ಇನ್ನು ಜಿಲ್ಲೆಯ ಸಿಇಓ ಜೊತೆ ಸರ್ಕಾರಿ ಅಧಿಕಾರಿಗಳು ಭೇಟಿ ನೀಡಿ ಪುಷ್ಪಗಳನ್ನು ಅರ್ಪಿಸಿ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಆಚರಣೆ ಮಾಡಿದರು.