ಬಾಗೇಪಲ್ಲಿ: ಲಾಕ್‌ಡೌನ್ ನಡುವೆಯೂ ಚೇಳೂರು ಹೋಬಳಿಯ ಚಾಕವೇಲು ವ್ಯಾಪ್ತಿಯ ಕುರುಬವಾಂಡ್ಲಪಲ್ಲಿ ಗ್ರಾಮದಲ್ಲಿ ಎಗ್ಗಿಲ್ಲದೆ ಮರಳು ಮಾಫಿಯಾ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಪ್ರಕರಣ-1:
ಲಾಕ್‌ಡೌನ್ ನಂತರ ಕಾನೂನು ಸುವ್ಯವಸ್ಥೆ ಪರಿಪಾಲನೆಯಲ್ಲಿ ಜಿಲ್ಲೆಯ ಪೊಲೀಸರು, ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳು ಭಾಗಿಯಾಗಿರುವುದನ್ನು ದುಷ್ಕರ್ಮಿಗಳು ಗಮನಿಸಿದ್ದಾರೆ. ಹಾಗಾಗಿ ಇದೇ ತಕ್ಕ ಸಮಯ ಎಂದು ಭಾವಿಸಿ ಅಧಿಕಾರಿಗಳ ಕಣ್ಣುತಪ್ಪಿಸಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದರು. ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಚೇಳೂರು ಪೊಲೀಸರು ಟ್ರ್ಯಾಕ್ಟರ್ ಮಾಲೀಕ ಹಾಗೂ ಚಾಲಕರನ್ನು ಹಿಡಿದು ಬಂಧಿಸಿದ್ದಾರೆ.
ಪ್ರಕರಣ-2:
ಇಂತಹದ್ದೇ ಇನ್ನೊಂದು ಪ್ರಕರಣ ವೆಂಕಟಾಪುರದಲ್ಲಿ ನಡೆದಿದz. ಚೌಡರೆಡ್ಡಿ ಎಂಬಾತ ಟ್ರ್ಯಾಕ್ಟರ್‌ನಲ್ಲಿ ಅಕ್ರಮ ಮರಳು ಮಾರಾಟ ಮಾಡುತ್ತಿದ್ದಾಗ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿರುವುದನ್ನು ಗಮನಿಸಿದ್ದಾನೆ. ಬಳಿಕ ಆತ ಟ್ರ್ಯಾಕ್ಟರ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಚೇಳೂರು ಪೊಲೀಸರು ಟ್ರ್ಯಾಕ್ಟರ್ ವಶಪಡಿಸಿಕೊಂಡು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.