ಶಿಡ್ಲಘಟ್ಟ/ ಚಿಕ್ಕಬಳ್ಳಾಪುರ: ಸಿಸಿ ರಸ್ತೆ ಕಾಮಗಾರಿ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಗಲಾಟೆ ನಡುವೆಯೇ ಗುಡಿಸಲಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಡ್ಲವಾರಹಳ್ಳಿಯಲ್ಲಿ ನಡೆದಿದೆ.
ನರೇಗಾ ಕಾಮಗಾರಿಯ ಸಿಸಿ ರಸ್ತೆಯ ಅಭಿವೃದ್ದಿ ವಿಚಾರವಾಗಿ ಗ್ರಾಮದ ನಾಗಭೂಷಣಪ್ಪ, ನವೀನ್, ನರಸಿಂಹಮೂರ್ತಿ, ರಮೇಶ್, ಅಶೋಕ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೇರಿದ್ದು, ದೊಣ್ಣೆ, ರಾಡ್‌ಗಳಿಂದ ಬಡಿದಾಡಿಕೊಂಡಿದ್ದಾರೆ. ಸದ್ಯ ಎರಡೂ ಗುಂಪುಗಳ ಗಾಯಗೊಂಡ ವ್ಯಕ್ತಿಗಳು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಶೋಕ್ ಎಂಬ ವ್ಯಕ್ತಿ ಪೆಟ್ರೋಲ್ನಿಂದ ಮನೆಗೆ ಬೆಂಕಿ ಹಚ್ಚಿದ್ದಾನೆ ಎಂದು ಮತ್ತೊಂದು ಗುಂಪಿನ ನರಸಿಂಹಮೂರ್ತಿ ಆರೋಪಿಸಿದ್ದಾರೆ. ಸದ್ಯ ಎರಡೂ ಗುಂಪುಗಳು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.