ಚಿಕ್ಕಬಳ್ಳಾಪುರ : ಅಂಧ ವಿದ್ಯಾರ್ಥಿನಿ ಪಿಯುಸಿ ಪರೀಕ್ಷೆಯಲ್ಲಿ 548 ಅಂಕಗಳನ್ನು ಪಡೆದು ಐಎಎಸ್ ಆಗುವ ಕನಸು ವ್ಯಕ್ತಪಡಿಸಿದ್ದಾಳೆ.
ಜಿಲ್ಲೆಯ ಗೌರಿಬಿದನೂರು ನಗರದ ಎಸ್ಎಸ್ಇಎ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಎನ್ ಲಕ್ಷ್ಮಿ ಈಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾಳೆ.
![n lakshmi](https://etvbharatimages.akamaized.net/etvbharat/prod-images/kn-ckb-05-14-blind-puc-student-spl-7202617_15072020154018_1507f_01639_740.jpg)
ಶಿಕ್ಷಣ ತಜ್ಞ ಡಾಕ್ಟರ್ ಹೆಚ್. ನರಸಿಂಹಯ್ಯ ಪ್ರೌಢಶಾಲೆಯಲ್ಲಿ ಶಿಕ್ಷಕರಾದ ನರಸಿಂಹಮೂರ್ತಿಯ ಮಗಳು ಹುಟ್ಟಿನಿಂದಲೂ ಅಂಧಳಾಗಿದ್ದಳು. ಶಿಕ್ಷಣದಲ್ಲಿ ಮಾತ್ರ ಸರಸ್ವತಿ ದೇವಿಯಾಗಿ ಮೆರೆಯುತ್ತಿದ್ದಾಳೆ. ಶಾಲೆಯಲ್ಲಿ ಉಪನ್ಯಾಸಕರ ಪಾಠವನ್ನು ಕೇಳಿ ನಂತರ ಸ್ನೇಹಿತರ ನೋಟ್ಸ್‌ಗಳ ಮುಖಾಂತರ ತಂದೆಯ ಟಾಂಕಿಗ್ ಲ್ಯಾಪ್‌ಟಾಪ್‌ನಲ್ಲಿ ರೆಕಾರ್ಡ್ ಮಾಡಿ ಕೇಳಿಸಿಕೊಂಡು ಈಗ ರಾಜ್ಯಕ್ಕೆ ಮಾದರಿ ವಿದ್ಯಾರ್ಥಿನಿಯಾಗಿದ್ದಾಳೆ. ಕಲಾ ವಿಭಾಗದಲ್ಲಿ ಒಟ್ಟು 548 ಅಂಕಗಳನ್ನು ಗಳಿಸಿದ್ದು, ಮಾತೃ ಭಾಷೆಯಲ್ಲಿ 98, ಇಂಗ್ಲಿಷ್ 72, ಇತಿಹಾಸ 97, ಅರ್ಥಶಾಸ್ತ್ರ 90, ಸಮಾಜ ಶಾಸ್ತ್ರದಲ್ಲಿ 96 ಅಂಕಗಳನ್ನು ಪಡೆದಿದ್ದಾಳೆ.
ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಕಾರದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿರುವ ಲಕ್ಷ್ಮಿ, ಮುಂದಿನ ದಿನಗಳಲ್ಲಿ ಐಎಎಸ್ ಆಗುವ ಬಯಕೆ ವ್ಯಕ್ತಪಡಿಸಿದ್ದಾಳೆ. ಸದ್ಯ ಬೆಳಕು ಕಾಣದ ಬದುಕಲ್ಲಿ ತನ್ನ ಆತ್ಮಸ್ಥೈರ್ಯದಿಂದ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.