ಚಿಕ್ಕಬಳ್ಳಾಪುರ: ಹಾಲು ಒಕ್ಕೂಟವು ಹಾಲಿನ ಬೆಲೆಯನ್ನು 4 ರೂ. ಕಡಿಮೆ ಮಾಡಿ, ರೈತರನ್ನು ಬಲಿಪಶು ಮಾಡಲು ಹೊರಟಿದ್ದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೆ.ಎಸ್ ಪುಟ್ಟಣ್ಣಯ್ಯ ಬಣ) ನಗರದ ಹೊರವಲಯದ ನಂದಿ ಕ್ರಾಸ್ ಬಳಿಯ ಮೆಗಾ ಡೈರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.
ಹೈನುಗಾರಿಕೆಯನ್ನು ನಂಬಿ ಕುಟುಂಬವನ್ನು ಮುನ್ನೆಡೆಸುತ್ತಿರುವ ಉದ್ದಿಮೆಯನ್ನು ಸಂಪೂರ್ಣವಾಗಿ ನಿರ್ಣಾಮ ಮಾಡಲು ಹೊರಟಿರುವ ಹಾಲು ಒಕ್ಕೂಟವು ಹಾಲಿನ ಬೆಲೆಯನ್ನು 4 ರೂ ಕಡಿಮೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೇ ಒಕ್ಕೂಟದಲ್ಲಿ ಅನಿವಾರ್ಯ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿ, ಅನಗತ್ಯ ಸಿಬ್ಬಂದಿ ತೆದುದು ಹಾಕಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.