ಬಾಗೇಪಲ್ಲಿ: ತಾಲೂಕಿನ ಮಿಟ್ಟೇಮಿರಿ ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಲಕ್ಷ್ಮಿ ಹಾಗೂ ಅಂಜಿನಮ್ಮ ಎಂಬ ಇಬ್ಬರು ಮಹಿಳೆಯರನ್ನು ಬಂಧಿಸಿ, 21 ಸಾವಿರ ರೂ. ನಗದು ಹಾಗೂ ಮಟ್ಕಾ ಚೀಟಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ರವಿಶಂಕರ್ ಅವರ ನೇತೃತ್ವದ ತಂಡ ಮಟ್ಕಾ ಅಡ್ಡೆ ಮೇಲೆ ದಾಳಿ ನಡೆಸಿ 21 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಕುರಿತು ಮಿಟ್ಟೇಮಿರಿ ಹೊರ ಠಾಣೆಯಲ್ಲಿ ದೂರು ದಾಖಲಾಗಿದೆ.