ETV Bharat / state

ಚಿಕ್ಕಬಳ್ಳಾಪುರ: ಭಾರಿ ಮಳೆಯಿಂದ ಮನೆಗೆ ನುಗ್ಗಿದ ನೀರು.. ನಗರವಾಸಿಗಳಿಂದ ಆಕ್ರೋಶ

ಚಿಕ್ಕಬಳ್ಳಾಪುರ ನಗರದ 1 ನೇ ವಾರ್ಡ್ ಹಾಗೂ 2 ನೇ ವಾರ್ಡ್​ನ ಮಧ್ಯದಲ್ಲಿರುವ ನಗರವಾಸಿಗಳಿಗೆ ಮಳೆ ಬಂತಂದ್ರೆ ಸಾಕಷ್ಟು ಪರದಾಟ ನಡೆಸುವಂತಾಗಿದೆ.

ಮಳೆ ಅವಾಂತರ
ಮಳೆ ಅವಾಂತರ
author img

By

Published : Aug 1, 2022, 6:06 AM IST

ಚಿಕ್ಕಬಳ್ಳಾಪುರ: ಮಳೆರಾಯನ ಮುನಿಸು ಯಾಕೋ ನಗರಕ್ಕೆ ಬಿಟ್ಟಿಲ್ಲ ಅನಿಸುತ್ತೆ. ಕಳೆದ ದಿನ ಸುರಿದ ಭಾರಿ ಮಳೆಗೆ ನಗರವಾಸಿಗಳ ಮನೆಗಳಿಗೆ ನೀರು ನುಗ್ಗಿದು ಸಾಕಷ್ಟು ಪರದಾಟ ನಡೆಸುವಂತಾಗಿದೆ. ರಾತ್ರಿ ಇಡೀ ಮಳೆಯ ನೀರಿನೊಂದಿಗೆ ಮನೆಯಲ್ಲಿ ಕಾಲಕಳೆಯುವಂತಾಗಿದೆ. ಇಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ.

ಮಳೆ ಅವಾಂತರದ ಬಗ್ಗೆ ಸ್ಥಳೀಯರು ಮಾತನಾಡಿರುವುದು

ನಗರದ 1 ನೇ ವಾರ್ಡ್ ಹಾಗೂ 2 ನೇ ವಾರ್ಡ್​ನ ಮಧ್ಯದಲ್ಲಿರುವ ನಗರವಾಸಿಗಳಿಗೆ ಮಳೆ ಬಂತಂದ್ರೆ ಸಾಕಷ್ಟು ಪರದಾಟ ನಡೆಸುವಂತಾಗಿದೆ. ಇಬ್ಬರು ವಾರ್ಡ್‌ನ ಮೆಂಬರ್‌ಗಳು ನಮಗೇನು ಸಂಬಂಧವಿಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದು, ಇದರಿಂದ ಕಳೆದ ರಾತ್ರಿ ಸುರಿದ ಬಾರಿ ಮಳೆಯಿಂದ ಮನೆಗಳಿಗೆ - ಅಂಗಡಿಗಳಿಗೆ ನೀರು ನುಗ್ಗಿದ್ದು, ಇದರಿಂದ ಎಲ್ಲಿಲ್ಲದ ನಷ್ಟ ಹಾಗೂ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಇನ್ನು ನಗರದ 23 ನೇ ವಾರ್ಡ್​ನಲ್ಲಂತೂ ರಾತ್ರಿಯಿಡಿ ಜಾಗರಣೆ ಮಾಡಿ ಕಾಲಕಳೆಯುವಂತಾಗಿದೆ. ಜಚ್ಚನಿ ಕಾಲೇಜಿನ ನಿವಾಸಿಗಳಿಗೆ ಮಳೆ ಬಂತಂದ್ರೆ ಸಾಕು ಇಡೀ ದಿನ ಕತ್ತಲಲ್ಲಿ ಕಾಲಕಳೆಯುವುದರ ಜೊತೆಗೆ ಊಟ ವಸತಿ ಬಿಟ್ಟು ಸಾಕಷ್ಟು ಪರದಾಟ ನಡೆಸುವಂತಾಗಿದೆ. ಹೌದು, ಮುಖ್ಯರಸ್ತೆ ಎತ್ತರದಲ್ಲಿರುವುದರಿಂದ ಮಳೆ ನೀರೆಲ್ಲ ಮನೆಗಳಿಗೆ ನುಗ್ಗಿ ಎಲ್ಲಿಲ್ಲದ ತೊಂದರೆ ಅನುಭವಿಸುವಂತಾಗಿದೆ.

ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಲ್ಲಿ ಮನವಿ: ಈಗಾಗಲೇ ಸಾಕಷ್ಟು ಬಾರಿ ಪೌರಾಯುಕ್ತರು ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಇದೇ ರೀತಿ, ಮತ್ತೊಂದು ಬಾರಿ ಆದಲ್ಲಿ ನಗರಸಭೆಯ ಮುಂದೆಯೇ ನಿವಾಸ ಮಾಡಲಾಗುವುದು ಎಂದು ಸ್ಥಳೀಯ ವ್ಯಕ್ತಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಅಧಿಕ ಮಳೆಯಿಂದ ಈ ರೀತಿ ಅವಾಂತರಗಳು ಸೃಷ್ಟಿಯಾಗಿರುವುದರಿಂದ ನಗರವಾಸಿಗಳು ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಓದಿ: ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್​ನಲ್ಲಿ ರೈತರ ಪ್ರತಿಭಟನಾ ಧರಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.