ಚಿಂತಾಮಣಿ: ನಗರ ಠಾಣೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಶಾಂತಿ ಸಭೆಯಲ್ಲಿ ಎಲ್ಲ ಮಸೀದಿಯ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು, ಮುಸ್ಲಿಂ ಮುಖಂಡರುಗಳು ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಅವರು, ರಂಜಾನ್ ಹಬ್ಬವನ್ನು ಶಾಂತಿ- ಸೌಹಾರ್ದತೆಯಿಂದ ಎಲ್ಲ ಆಚರಿಸಿ, ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತೆ ಕರೆ ನೀಡಿದರು.
ಸಭೆಯಲ್ಲಿ ಮುಸ್ಲಿಂ ಮುಖಂಡರು ಮಾತನಾಡಿ, ಜಾಮಿಯಾ ಮಸೀದಿಯಿಂದ ಈದ್ಗಾ ಮೈದಾನಕ್ಕೆ ಹೋಗುವ ಸಂದರ್ಭದಲ್ಲಿ ವಾಹನಗಳಿಂದ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಪೊಲೀಸ್ ಇಲಾಖೆಗೆ ಕೋರಿದರು. ಈ ಸಂದರ್ಭದಲ್ಲಿ ಸಬ್ ಇನ್ಸ್ ಪೆಕ್ಟರ್ ಆರ್ ನಾರಾಯಣಸ್ವಾಮಿ. ಜಹೀರ್ ಪಾಷಾ. ಅಕ್ರಂ ಪಾಷಾ. ವಕೀಲರಾದ ಸಿ.ಎಸ್ .ಅನ್ವರ್ ಖಾನ್. ನಿಸ್ಸಾರ್ ಅಹ್ಮದ್ .ಖಾದರ್.ನದೀಮ್ ಪಾಷಾ ಕವ್ವಾಲಿ, ಕೆ .ಎಸ್. ನೂರುಲ್ಲಾ. ಜಮೀರ್ ಪಾಷಾ. ಸೇರಿದಂತೆ ಹಲವರು ಭಾಗವಹಿಸಿದ್ದರು.