ETV Bharat / state

ಪಂಚರತ್ನ ರಥಯಾತ್ರೆ ವೇಳೆ ಮಗುವಿಗೆ ನಾಮಕರಣ ಮಾಡಿದ ಕುಮಾರಸ್ವಾಮಿ - ಈಟಿವಿ ಭಾರತ ಕನ್ನಡ

ಚಿಕ್ಕಬಳ್ಳಾಪುರದ ಚಿನ್ನಸಂದ್ರ ಗ್ರಾಮದಲ್ಲಿ ಪಂಚರತ್ನ ಯಾತ್ರೆ ವೇಳೆ ಗ್ರಾಮವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಗುವಿಗೆ ನಾಮಕರಣ ಮಾಡಿದ್ದಾರೆ.

pancharathna-yathra-at-chikkaballapur
ಪಂಚರತ್ನ ರಥಯಾತ್ರೆ ವೇಳೆ ಮಗುವಿಗೆ ನಾಮಕರಣ ಮಾಡಿದ ಕುಮಾರಸ್ವಾಮಿ
author img

By

Published : Nov 24, 2022, 3:39 PM IST

Updated : Nov 24, 2022, 3:52 PM IST

ಚಿಕ್ಕಬಳ್ಳಾಪುರ: ಪಂಚರತ್ನ ರಥಯಾತ್ರೆ ವೇಳೆ ಚಿನ್ನಸಂದ್ರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಮಗುವಿಗೆ ನಾಮಕರಣ ಮಾಡಿದ್ದಾರೆ. ಚಿನ್ನಸಂದ್ರಕ್ಕೆ ಬಂದಿದ್ದ ದಾಚಾಪುರ ಗ್ರಾಮದ ಸುರೇಶ್ ಮತ್ತು ರೂಪಾ ದಂಪತಿಯು ಮಗುವಿಗೆ ನಾಮಕರಣ ಮಾಡುವಂತೆ ಕೋರಿದ್ದು, ಇದೇ ವೇಳೆ ಮಗುವಿಗೆ ರಿಶಿಕ್ ಎಂದು ಹೆಸರಿಟ್ಟಿದ್ದಾರೆ.

ಶಿಡ್ಲಘಟ್ಟ ಕ್ಷೇತ್ರದ ಹುಣಸೇನಹಳ್ಳಿಯಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಹೋರಾಟ ಮಾಡ್ತಿದ್ದೇನೆ. ರಾಜ್ಯಾದ್ಯಂತ ಪಂಚರತ್ನ ಯೋಜನೆಯನ್ನು ನಾಡಿನ ಜನತೆಗೆ ತಲುಪಿಸಬೇಕು. ಕಳೆದ ಶಿಡ್ಲಘಟ್ಟ ಚುನಾವಣೆಯಲ್ಲಿ ನನ್ನಿಂದ ತಪ್ಪಾಗಿದೆ. ಇದರಿಂದ ಮೇಲೂರು ರವಿ ನೊಂದಿದ್ದಾರೆ. ಕುಟುಂಬದ ಮಗನಾಗಿ ಕೆಲಸ ಮಾಡ್ತಿದ್ದಾರೆ. ಅವರಿಗೆ ನಿಮ್ಮ ಆಶೀರ್ವಾದ ಬೇಕು. ಜೆಡಿಎಸ್ ಸ್ವತಂತ್ರ ಸರ್ಕಾರ ಬರಲು 123 ಕ್ಷೇತ್ರದಲ್ಲಿ ಗೆಲ್ಲಬೇಕಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ರವಿ ಅವರನ್ನು ಗೆಲ್ಲಿಸಿ ನಿಮ್ಮೆಲ್ಲರ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ರಥಯಾತ್ರೆ ಹಿನ್ನೆಲೆ ಹುಣಸೇನಹಳ್ಳಿಯಿಂದ ಶಿಡ್ಲಘಟ್ಟನಗರದವರೆಗೂ ಸಂಪೂರ್ಣ ರಸ್ತೆ ಮಾರ್ಗ ಬಂದ್ ಆಗಿದ್ದು ವಾಹನ ಸವಾರರು ಸಾಕಷ್ಟು‌ ಪರದಾಡುವಂತಾಗಿತ್ತು.

ಪಂಚರತ್ನ ರಥಯಾತ್ರೆ ವೇಳೆ ಮಗುವಿಗೆ ನಾಮಕರಣ ಮಾಡಿದ ಕುಮಾರಸ್ವಾಮಿ

ಪಂಚರತ್ನ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ.. ಕೋಲಾರದ ಮುಳುಬಾಗಿಲಿನ ಕುರುಡುಮಲೆಯಿಂದ ಪಂಚರತ್ನ ರಥಯಾತ್ರೆ ಆರಂಭವಾಗಿದೆ. ತಾಯಿ ಚಾಮುಂಡಿ ಅನುಗ್ರಹ ಕೂಡ ಇದೆ. ಜನರ ಭಾವನೆ ಏನಿದೆ ಎನ್ನುವುದನ್ನು ಗಮನಿಸುತ್ತಿದ್ದೇನೆ. ಪಂಚರತ್ನ ರಥಯಾತ್ರೆ ಜನರ ಹೃದಯಕ್ಕೆ ಹೋಗ್ತಿದೆ ಎಂದರು.

ಸಾಲ ಮನ್ನಾ ವಿಚಾರ.. ಸಾಲ ಮನ್ನಾದ ವಿಚಾರವಾಗಿಯೇ ಆರ್ಥಿಕ ಇಲಾಖೆ ನನ್ನ ಬಳಿಯೇ ಇರಬೇಕು ಎಂದು ಒತ್ತಡ ಹಾಕಿದ್ದು.ಹೀಗಾಗಿಯೇ ಈ ಖಾತೆ ನನ್ನ ಬಳಿ ಇಟ್ಟುಕೊಂಡೆ. ಇಲ್ಲದಿದ್ರೆ ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ಬಿಡುತ್ತಿರಲಿಲ್ಲ. ಪಂಚರತ್ನ ಯಾತ್ರೆ ಬಳಿಕ ಪುಸ್ತಕ ಓದ್ತಿದ್ದೀನಿ. ಇಂಡಿಯಾಸ್ ಎಕಾನಮಿ ನೆಹರೂ ಟೂ ಮೋದಿ ಎಂಬ ಪುಸ್ತಕ ಓದುತ್ತಿದ್ದೇನೆ. ಎಲ್ಲರೂ ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದಾರೆ. ನಮ್ಮ ಸಮುದಾಯದಿಂದಲೂ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಮಾಡ್ತಿದ್ದಾರೆ ಎಂದು ಹೆಚ್​ಡಿಕೆ ತಿಳಿಸಿದರು.

ದಲಿತರನ್ನು ಡಿಸಿಎಂ ಮಾಡುತ್ತೇನೆ : ನಮ್ಮ ಪಕ್ಷದ ಅಧ್ಯಕ್ಷರು ಸಿ ಎಂ ಇಬ್ರಾಹಿಂ ಒಂದು ಮಾತು ಹೇಳಿದ್ರು, ಕುಮಾರಸ್ವಾಮಿ ಅವರು ದೆಹಲಿಗೆ ಹೋಗ್ತಾರೆ, ನಾನು ಇಲ್ಲಿ ಸಿಎಂ ಆಗ್ತೀನಿ ಅಂತ ಹೇಳಿದ್ದಾರೆ. ಅದನ್ನು ನಾವು ಕೂತು ಪಕ್ಷದಲ್ಲಿ ತೀರ್ಮಾನ ಮಾಡ್ತೀವಿ. ಸಿದ್ದರಾಮಯ್ಯ ಯಾರೋ ಕಟ್ಟಿದ ಗೂಡಲ್ಲಿ ಕುಳಿತು ಅಧಿಕಾರ ಮಾಡ್ತಿದ್ದಾರೆ. ನಾನು ಇಲ್ಲಿ ಪ್ರತೀ ವೋಟಿಗೆ ಓಡಾಡ್ತಿದ್ದೇನೆ. ನಾನು ದಲಿತರಿಗೆ, ಮಹಿಳೆಯರಿಗೆ ಡಿಸಿಎಂ ಮಾಡ್ತೀನಿ. ಅಂದು ಪರಮೇಶ್ವರ್ ಅವರನ್ನು ಸಿಎಂ ಮಾಡಲು ಒಪ್ಪಲಿಲ್ಲ. ಹೈಕಮಾಂಡ್ ಒಪ್ಪಿಗೆ ಕೊಟ್ರು, ಇವರು ಕೊಡಲಿಲ್ಲ. ಇನ್ನು, ನಾವು ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ : ಬಿಜೆಪಿಯವರು ಎಷ್ಟೇ ಟಾರ್ಗೆಟ್ ಮಾಡಿದ್ರು ಸಿದ್ದರಾಮಯ್ಯ ಹೆದರಲ್ಲ: ಆರ್ ವಿ ದೇಶಪಾಂಡೆ

Last Updated : Nov 24, 2022, 3:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.