ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಶ್ರೀ ಗಂಗಾ ಭಾಗೀರಥಿ ದೇವಾಲಯ (Shree Ganga Bhagirathi Temple) ಮಳೆಯಿಂದಾಗಿ ಜಲಾವೃತವಾಗಿದ್ದು, ಭಕ್ತಾದಿಗಳಿಗೆ ನೀಷೇಧ ಹೇರಲಾಗಿದೆ.
ವಾರದ ಪ್ರತಿ ಸೋಮವಾರ ಮಾತ್ರ ಶ್ರೀ ಗಂಗಾ ಭಾಗೀರಥಿ ದೇವಾಲಯ ತೆರೆಯುವುದು ವೈಶಿಷ್ಟ್ಯ. ಕೇವಲ ಗೌರಿಬಿದನೂರು ತಾಲೂಕಿನ ಜನ ಮಾತ್ರವಲ್ಲದೇ ನಾಡಿನ ನಾನಾ ಭಾಗಗಳಿಂದ ಪ್ರತಿ ಸೋಮವಾರ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಕಲ್ಯಾಣಿಯಲ್ಲಿ ಮಡೆ ಸ್ನಾನ ಮಾಡಿ, ತಾಯಿ ದರ್ಶನ ಪಡೆದು ತಮ್ಮ ಹರಕೆ ತೀರಿಸಿಕೊಳ್ಳುವುದು ವಾಡಿಕೆ. ಆದರೆ, ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯರಾತ್ರಿಯೇ ದೇವಸ್ಥಾನ ಜಲಾವೃತವಾಗಿದ್ದು, ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
ಎರಡನೇ ಕಾರ್ತಿಕ ಸೋಮವಾರದಂದು (ನ.15) ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ ಅವರು ಇಲ್ಲಿಗೆ ಭೇಟಿ ನೀಡಿ, ಭಕ್ತರ ಅನ್ನದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದರು. ಅವರು ಬಂದು ಹೋದ ನಂತರ ದೇಗುಲ ನೀರಿನಲ್ಲಿ ಜಲಾವೃತವಾಗಿದೆ ಎಂದು ಸ್ಥಳೀಯ ಭಕ್ತರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: VIDEO... ವರುಣಾಘಾತಕ್ಕೆ ತಿರುಪತಿಯ ತಿಮ್ಮಪ್ಪನ ಸನ್ನಿಧಿ ತತ್ತರ..
ಇನ್ನು ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.