ಚಿಕ್ಕಬಳ್ಳಾಪುರ : ಜಿಲ್ಲೆಯ ಗುಡಿಬಂಡೆಯಲ್ಲಿ ಪಟ್ಟಣ ಪಂಚಾಯತ್ ನೀಡುತ್ತಿದ್ದ ಉಚಿತ ಹಾಲು ವಿತರಣೆ ವೇಳೆ ಸಾರ್ವಜನಿಕರು ಅಂತರ ಕಾಯ್ದುಕೊಳ್ಳದೇ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆಯಿತು.
ಗುಡಿಬಂಡೆಯಲ್ಲಿ ಪ್ರತಿ ವಾರ್ಡ್ಗೆ ತೆರಳಿ ಹಾಲಿನ ಪ್ಯಾಕೇಟ್ಗಳನ್ನು ವಿತರಿಸಲಾಗುತ್ತಿದೆ. ಪಟ್ಟಣದ 3ನೇ ವಾರ್ಡ್ನಲ್ಲಿ ಹಾಲಿನ ಪ್ಯಾಕೇಟ್ಗಳನ್ನು ಪಡೆಯಲು ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂಕುನುಗ್ಗಲು ಆರಂಭಿಸಿದರು.
ಸಾಲಿನಲ್ಲಿ ನಿಂತು ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡರೂ ಜನ ಕ್ಯಾರೇ ಎನ್ನದೇ ಅವರೊಂದಿಗೆ ವಾಗ್ವಾದಕ್ಕಿಳಿದು ಜಗಳ ಮಾಡಿದರು.