ಚಿಕ್ಕಬಳ್ಳಾಪುರ: ಬಿಜೆಪಿ ಪಕ್ಷ ಕೋಮುವಾದಿ, ಮತೀಯವಾದಿ ಪಕ್ಷ ಅದರೊಟ್ಟಿಗೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಳ್ಳುತ್ತಾರೆ ಅನ್ನೋ ಸುದ್ದಿಯನ್ನ ಮಾಧ್ಯಮಗಳಲ್ಲಿ ನೋಡಿ ಅಶ್ಚರ್ಯವಾಗುತ್ತಿದೆ. ಅದಕ್ಕೆ ಬಿಜೆಪಿ ಪಕ್ಷ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿಕೊಂಡಿಲ್ಲ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಂಡಿಲ್ಲ. ನಾನು ಆ ಪಕ್ಷದಲ್ಲಿದ್ದುಕೊಂಡೆ ಅಲ್ಲಿ ನಡೆಯೋದೆಲ್ಲಾ ಸರಿ ಎಂದು ಹೇಳಲು ಸಾಧ್ಯವೇ ಎಂದು ಸ್ವಪಕ್ಷದ ವಿರುದ್ದವೆ ಸಂಸದ ಬಚ್ಚೇಗೌಡ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಸಂಸದ ಬಚ್ಚೇಗೌಡ ದಿಶಾ ಸಭೆಗೆ ಹಾಜರಾಗಿದ್ದರು. ಸಭೆಯಲ್ಲಿ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಬರುವ ತಾಲೂಕುಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಬಯಲು ಸೀಮೆ ಪ್ರದೇಶದ ಮಳೆ ಅಭಾವ ಎಷ್ಟು ಹೆಕ್ಟೇರ್ ಪ್ರದೇಶಲ್ಲಿ ಬೆಳೆ ಒಣಗಿದೆ ಅನ್ನೋ ಮಾಹಿತಿಯನ್ನ ಅಧಿಕಾರಿಗಳಿಂದ ಪಡೆದರು ಲಾ ಅಂಡ್ ಆರ್ಡರ್ ಹೇಗಿದೆ ಎಂದು ಪೊಲೀಸ್ ಡಿವೈಎಸ್ಪಿ ಜತೆ ಚರ್ಚಿಸಿದರು.
ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ರಾಜ್ಯ ಸರ್ಕಾರ ಒಂದಷ್ಟು ತಾಲೂಕುಗಳಲ್ಲಿ ಬರ ಇದೆ ಅಂತ ಪಟ್ಟಿ ಮಾಡೋದಲ್ಲ, ಬಯಲುಸೀಮೆ ಭಾಗದ ನಾಲ್ಕು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರದ ಕೆಲವು ಭಾಗಗಳನ್ನ ಬರದ ಜಿಲ್ಲೆಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತೆ ಅನ್ನೋದು ಪ್ರಧಾನಿ ನರೇಂದ್ರ ಮೋದಿ ಜತೆ ದೇವೇಗೌಡರು ಕಾಣಿಸಿಕೊಂಡಿದ್ದು ದೃಢಪಡಿಸುತ್ತದೆ.
ಬಿಜೆಪಿ ಒಂದು ಕೋಮುವಾದಿ, ಮತೀಯವಾದ ಪಕ್ಷ ಜ್ಯಾತ್ಯಾತೀತ ಜನತಾದಳ ಪಕ್ಷ ಹೇಗೆ ಹೋಂದಾಣಿಕೆ ಮಾಡಿಕೊಳ್ಳುತ್ತದೆ ಅನ್ನೋದೆ ಆಶ್ಚರ್ಯ ನಾನೊಬ್ಬ ಬಿಜೆಪಿ ಸಂಸದ ಆಗಿ ನಮ್ಮ ಪಕ್ಷದ ವಿರುದ್ದ ಯಾಕೆ ಮಾತನಾಡುತ್ತೇನೆ ಅಂದ್ರೆ ಪಕ್ಷದಲ್ಲಿ ನಡೀತಿರೋದೆಲ್ಲಾ ಒಳ್ಳೆಯ ಬೆಳವಣಿಗೆಯಲ್ಲ. ಚುನಾವಣೆ ಆದಾಗಿನಿಂದ ಬಿಜೆಪಿ ರಾಜ್ಯಾಧ್ಯಕ್ಷನ ಬದಲಾವಣೆ ಆಗಲಿಲ್ಲ. ಪ್ರತಿಪಕ್ಷದ ನಾಯಕನ ಆಯ್ಕೆಯೂ ಮಾಡಲಿಲ್ಲ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೆ ಬಿಜೆಪಿಗೇನೂ ಲಾಭ ಆಗೊಲ್ಲ . ಇರೋ ಪಕ್ಷದ ಬಲವು ಕುಗ್ಗಿ ಹೋಗುತ್ತದೆ ಎಂದು ಸ್ವಪಕ್ಷದ ವಿರುದ್ದವೆ ಸಂಸದ ಬಚ್ಚೇಗೌಡ ವಾಗ್ದಾಳಿ ನಡೆಸಿದರು. ದಿಶಾ ಸಭೆಯಲ್ಲಿ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ರವೀಂದ್ರ, ಸಿಇಒ ಪ್ರಕಾಶ್ ನಿಟ್ಟಾಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ : ಸಂಸದ ಎಸ್ ಮುನಿಸ್ವಾಮಿ