ETV Bharat / state

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಾದಯಾತ್ರೆಗೆ ಪರೋಕ್ಷ ಸಾಥ್ ಕೊಟ್ಟ ಸಂಸದ ಬಚ್ಚೇಗೌಡ - ಕಾಂಗ್ರೆಸ್​ ಯಾತ್ರೆಗೆ ಬಿಜೆಪಿ ಸಂಸದ ಬಚ್ಚೇಗೌಡ ಪರೋಕ್ಷ ಸಾಥ್​

ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ತಜ್ಞರು ನೀಡಿದ ಸಲಹೆಯಂತೆ ಸರ್ಕಾರ ವೀಕೆಂಡ್​, ನೈಟ್​ ಕರ್ಫ್ಯೂ ಜಾರಿ ಮಾಡಿದೆ. ಇಂದು ರಾತ್ರಿ 10 ಗಂಟೆಯಿಂದಲೇ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ ಎಂದು ಸಂಸದ ಬಿ.ಎನ್​. ಬಚ್ಚೇಗೌಡ ತಿಳಿಸಿದರು.

bacchegowda
ಬಚ್ಚೇಗೌಡ
author img

By

Published : Jan 7, 2022, 8:20 PM IST

Updated : Jan 7, 2022, 8:46 PM IST

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್​ನ 'ನೀರಿಗಾಗಿ ನಡಿಗೆ' ರ್ಯಾಲಿಗೆ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮೇಕೆದಾಟು ನೀರು ಕರ್ನಾಟಕಕ್ಕೆ ಸೇರಿದ್ದು. ಅದನ್ನು ತಮಿಳುನಾಡು ವಿನಾಕಾರಣ ಅಡ್ಡಿ ಮಾಡುತ್ತಲೇ ಇದೆ. ಕಾಂಗ್ರೆಸ್​ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ತಪ್ಪೇನಿಲ್ಲ. ಯಾವುದೇ ಘರ್ಷಣೆ, ಗದ್ದಲ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್​ ಯಾತ್ರೆಗೆ ಪರೋಕ್ಷವಾಗಿ ಬೆಂಬಲಿಸಿದ್ದಾರೆ.

ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಕೊರೊನಾ ರೂಲ್ಸ್ ಬ್ರೇಕ್ ಮಾಡದಂತೆ ಪಾದಯಾತ್ರೆ ಮಾಡಲಿ. ಯಾವುದೆ ರೀತಿ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ನಮ್ಮ ರಾಜ್ಯಕ್ಕೆ ನೀರಾವರಿ ಯೋಜನೆಗಳಲ್ಲಿ ಅನ್ಯಾಯ ಆಗಿದೆ. ತಮಿಳುನಾಡಿನ ಸರ್ಕಾರ ಈ ರೀತಿ ಯಾಕೆ ಮಾಡ್ತಾ ಇದೆಯೋ ಗೊತ್ತಿಲ್ಲ ಎಂದರು.

ತಜ್ಞರ ಸೂಚನೆಯಂತೆ ಕರ್ಫ್ಯೂ ಜಾರಿ

ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ತಜ್ಞರು ನೀಡಿದ ಸಲಹೆಯಂತೆ ಸರ್ಕಾರ ವೀಕೆಂಡ್​, ನೈಟ್​ ಕರ್ಫ್ಯೂ ಜಾರಿ ಮಾಡಿದೆ. ಇಂದು ರಾತ್ರಿ 10 ಗಂಟೆಯಿಂದಲೇ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ ಎಂದು ಸಂಸದ ಬಿ.ಎನ್​.ಬಚ್ಚೇಗೌಡ ತಿಳಿಸಿದರು.

ಇದನ್ನೂ ಓದಿ: ಮತ್ತೆ ಹೆಣ್ಣು ಹುಟ್ಟುವ ಭಯದಲ್ಲಿ ಹೆರಿಗೆ ಹಿಂದಿನ ದಿನವೇ ಗರ್ಭಿಣಿ ಆತ್ಮಹತ್ಯೆ: ಹೊಟ್ಟೆಯಲ್ಲಿದ್ದದ್ದು ಗಂಡು ಮಗು

Last Updated : Jan 7, 2022, 8:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.