ಚಿಕ್ಕಬಳ್ಳಾಪುರ: ಬಿಜೆಪಿ ಭ್ರಷ್ಟ ಪಕ್ಷವಾಗಿದೆ. ಮತ ನೀಡಿ ಮತ್ತೊಮ್ಮೆ ಮೋಸ ಹೋಗಬೇಡಿ. ಕಾಂಗ್ರೆಸ್ಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಹೇಳಿದರು.
ಚಿಂತಾಮಣಿ ತಾಲೂಕಿನ ಕೋರ್ಲಪರ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಭ್ರಷ್ಟ ಪಕ್ಷವಾಗಿದ್ದು, ಕೋಟಿಗಟ್ಟಲೆ ಹಣ ನೀಡಿ ಶಾಸಕರನ್ನು ಕೊಂಡುಕೊಂಡು ಅಧಿಕಾರಕ್ಕೆ ಬಂದಿದೆ. ಇಂತಹ ಪಕ್ಷ ಅಭಿವೃದ್ಧಿ ಮಾಡುತ್ತ, ಅಧಿಕಾರಕ್ಕೆ ಬರಲು ಖರ್ಚು ಮಾಡಿರುವ ದುಡ್ಡು ಸಂಪಾದನೆ ಮಾಡುತ್ತಿದೆ ಎಂದು ದೂರಿದರು.
ಮುಂದಿನ ಚುನಾವಣೆಯಲ್ಲಿ ಕಾಸು ಕೊಡುವ ಬಿಜೆಪಿ ಪಕ್ಷವನ್ನು ಕಡೆಗಣಿಸಿ ಅಭಿವೃದ್ಧಿ ಮಂತ್ರ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ. ನನಗೂ 30 ಕೋಟಿ ಕೊಡಕ್ಕೆ ಬಂದಿದ್ದರು ಎಂದರು.
ಯುವಕರು ಬಿಜೆಪಿ ಎಂದು ಹೋಗಿ ಲಕ್ಷಾಂತರ ಯುವಜನ ನಿರುದ್ಯೋಗಿಗಳಾಗಿ ಪರದಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ಕಲ್ಪಿಸುತ್ತೇನೆ ಎಂದು ಬಿಜೆಪಿ ಸರ್ಕಾರ ಇಂದು ಲೂಟಿ ಮಾಡಿಕೊಂಡು ಯುವಜನರನ್ನು ಮರೆಯುತ್ತಿದೆ. ಇನ್ನಾದರೂ ಜನತೆ ಎಚ್ಚೆತ್ತುಕೊಂಡು ಬಿಜೆಪಿ ಪಕ್ಷವನ್ನು ಕಡೆಗಣಿಸಿ ಎಂದರು.
ಈ ವೇಳೆ, ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್ , ಕೃಷ್ಣಪ್ಪ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸುಬ್ರಹ್ಮಣಿ, ದೇವಗಾನಹಳ್ಳಿ ಮದ್ದಿರೆಡ್ಡಿ ,ನಾರಾಯಣ ರೆಡ್ಡಿ ,ಟಿ ಪ್ರಸಾದ್, ವೆಂಕಟನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯ ಕೋನಪ್ಪರೆಡ್ಡಿ, ಮಲ್ಲಿಕಾರ್ಜುನ್ ರೆಡ್ಡಿ, ಗೊಲ್ಲಪಲ್ಲಿ ವೆಂಕಟ್ರೋಣಪ್ಪ, ಚಂದ್ರಶೇಖರ, ದೇವರೆಡ್ಡಿ, ವೆಂಕಟಪತಿ, ಶ್ರೀರಾಮಪ್ಪ, ಪ್ರಕಾಶ್, ರವಿ ,ಚಂದ್ರ, ಶ್ರೀರಾಮಪ್ಪ ಸೇರಿದಂತೆ ಹಲವು ಮಂದಿ ಇದ್ದರು.
ಇದನ್ನೂ ಓದಿ: ಕೋವಿಡ್ ವೈರಸ್ ಹೊಸ ತಳಿ AY 4.0 ಆತಂಕ ಸದ್ಯಕ್ಕಿಲ್ಲ: ಹಾಗಂತ ಮೈ ಮರೆಯುವಂತಿಲ್ಲ..!