ETV Bharat / state

ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಸಾಕಷ್ಟು ನೋವು ತಂದಿದೆ.. ಸಚಿವ ಸುಧಾಕರ್ ಸಂತಾಪ

ಸಿದ್ದೇಶ್ವರ ಸ್ವಾಮೀಜಿ ಅತ್ಯಂತ ಸರಳ‌ ಜೀವಿ‌ - ಅವರು ದೈವಿಕ ಶಕ್ತಿಯಾಗಿದ್ದರು - ಸ್ವಾಮೀಜಿ ಅಗಲಿಕೆಗೆ ಸಚಿವ ಸುಧಾಕರ್ ಸಂತಾಪ.

Minister Sudhakar condoles demise of Siddeshwar Swamiji
ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಸಾಕಷ್ಟು ನೋವು ತಂದಿದೆ.. ಸಚಿವ ಸುಧಾಕರ್ ಸಂತಾಪ
author img

By

Published : Jan 3, 2023, 5:03 PM IST

ಆರೋಗ್ಯ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಸಾಕಷ್ಟು ನೋವು ತಂದಿದ್ದು, ಅವರ ಅಭಿಮಾನಿಗಳಿಗೆ ನೋವನ್ನು ಬರೆಸುವ ಶಕ್ತಿ ಕೊಡಲಿ ಎಂದು ಆರೋಗ್ಯ ಸಚಿವ ಸುಧಾಕರ್ ಸಂತಾಪ ಸೂಚಿಸಿದರು. ಸಿದ್ದೇಶ್ವರ ಸ್ವಾಮಿಜೀಯವರ ಅಗಲಿಕೆ‌ ಸಾಕಷ್ಟು‌ ನೋವನ್ನು ತಂದಿದ್ದು ಅವರು ಅಮರವಾಗಿದ್ದು ಮುಕ್ತಿ ಸಿಗಲಿ‌ ಎಂದು ಸಂತಾಪ‌ ಸೂಚಿಸಿದರು.

ದೈಹಿಕವಾಗಿ‌ ಅಗಲಿದರು ಅವರ ಆಶೀರ್ವಾದ ಲೋಕಕಲ್ಯಾಣಕ್ಕಾಗಿ‌ ಎಲ್ಲರ ಮೇಲೂ ಇರುತ್ತೆ. ಕಳೆದ ಆರೇಳು ದಶಕಗಳಿಂದ ಭೋದಿಸಿದ ಆದ್ಯತ್ಮಿಕ ವಿಷಯಗಳ ಬಗ್ಗೆ ಆಶಿರ್ವಾದ ಮಾಡಿದ್ದಾರೆ. ಕಳೆದ ಎರಡು‌ ಮೂರು ದಿನಗಳಿಂದ ಅಸ್ವಸ್ಥ ಆಗಿದ್ದರು. ನಾನು ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ರೋಗಗಕ್ಕೆ ಚಿಕಿತ್ಸೆ ಕೊಡಬೇಡಿ ನೋವಿಗೆ ಮಾತ್ರ ಚಿಕಿತ್ಸೆ ನೀಡಿ ದೇಹ ಮತ್ತು ದೇವರು ಕರೆಯುವಂತ ಸಂದರ್ಭದಲ್ಲಿ ಬಹಳ ಸಂತೋಷವಾಗಿ ದೇವರ ಬಳಿ ಹೋಗುತ್ತಿದ್ದೇನೆ. ಇಲ್ಲಿ ಇರಬೇಕೆಂಬ ಆಸೆ ನನಗೆ ಇಲ್ಲ ದೇವರು‌ ಕಳುಹಿಸಿಕೊಟ್ಟ ಕೆಲಸ‌ ಮಾಡಿದ್ದೇನೆ ಎಂದು ತಿಳಿಸಿದ್ದರು.

ಇನ್ನೂ ಪವಿತ್ರ ದಿನ ವೈಕುಂಠ ಏಕಾದಶಿ ದಿನದಂದು ಅಗಲಿರುವುದು ಅ ತಿರುಪತಿ ತಿಮ್ಮಪ್ಪನ್ನೇ ಅವರ ಒಳಗಡೆ ಕರೆದುಕೊಂಡಿದ್ದಾನೆ. ಅವರು ಅತ್ಯಂತ ಸರಳ‌ ಜೀವಿ‌, ತತ್ವ ಆದರ್ಶ ಜೀವಿ ಆಗಿದ್ದರು. ಅವರು ಯಾವುದೇ ಬಟ್ಟೆ ಹಾಕಿದರು ಜೇಬು ಇರಲಿಲ್ಲ. ನಾನು ಮಠ‌ಮಾನ್ಯ ಮಠಾಧೀಶರನ್ನು ನೋಡಿದ್ದೇನೆ. ಆದರೆ, ನನಗೆ ಸಿದ್ದೇಶ್ವರ ಸ್ವಾಮೀಜಿಗಳು ಬಹಳ ವಿಶೇಷ ವಾಗಿದ್ದರು. ಅವರನ್ನು ವ್ಯಕ್ತಿ ಎಂದರೆ ತಪ್ಪಾಗುತ್ತೆ ದೈವಿಕ ಶಕ್ತಿಯಾಗಿದ್ದರು, ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದ ನಮ್ಮ‌ ಮೇಲೆ‌ ಇರಲಿದೆ ಎಂದು ತಿಳಿಸಿದರು.

ಇನ್ನೂ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮಕ್ಕೆ ಸಕಲ‌ ತಯಾರಿ ನಡೆಸಲಾಗಿದ್ದು, ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್​ ಚಾಲನೆಯನ್ನು‌ ಕೊಡಲಿದ್ದು ಮುಖ್ಯಮಂತ್ರಿಗಳು, ನಿರ್ಮಲಾನಂದ ಸ್ವಾಮಿಜೀಗಳು, ಧರ್ಮಸ್ಥಳ ವಿರೇಂದ್ರ ಹೆಗಡೆ ಸೇರಿದಂತೆ ಗಣ್ಯರು ಬರಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತ ಸಾಗರ - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.