ಚಿಕ್ಕಬಳ್ಳಾಪುರ: ವಾರಾಂತ್ಯದ ಕರ್ಫ್ಯೂ ರದ್ದಾಗಿದೆ ಅಂದಾಕ್ಷಣ ಜನ ಬೇಕಾಬಿಟ್ಟಿ ಓಡಾಡಿಬಿಡಬೇಕು ಅಂತಲ್ಲ, ವೀಕೆಂಡ್ ಕರ್ಫ್ಯೂ ರದ್ದಾದ ನಂತರ ಈಗ ಜನರ ಜವಾಬ್ದಾರಿ ಹೆಚ್ಚಾಗಿದೆ ಎಂದು ಚಿಕ್ಕಬಳ್ಳಾಪುರ ನಗರ ಹೊರವಲಯದ ಎಸ್ಪಿ ಕಚೇರಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಕರ್ಫ್ಯೂನಿಂದ ಬೀದಿ ವ್ಯಾಪಾರಿಗಳು ಎದುರಿಸಿದ್ದ ಆರ್ಥಿಕ ಸಂಕಷ್ಟ ಗೊತ್ತಿದೆ. ಜನರ ಸಂಕಷ್ಟವನ್ನು ಅರಿತು ವೀಕೆಂಡ್ ಕರ್ಫ್ಯೂವನ್ನು ಸರ್ಕಾರ ರದ್ದುಗೊಳಿಸಿದೆ.ಆದರೆ,ಎಂದಿನಂತೆ ನೈಟ್ ಕರ್ಫ್ಯೂ ಮುಂದುವರೆಯಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಶೇ 5% ಸೋಂಕಿತರ ಪ್ರಮಾಣ ಇದೆ. ಶೇಖಡಾ 5 % ಮೀರಿದರೆ ಮುಂದಿನ ವಾರ ಕರ್ಪ್ಯೂ ಮಾಡುತ್ತೇವೆ ಕರ್ಪ್ಯೂ ಇಲ್ಲ ಅಂತ ಜನ ಹೊಣೆಗಾರಿಕೆಯನ್ನು ಮರೆಯಬಾರದು. ನೈಟ್ ಕರ್ಪ್ಯೂ ಬಾರಿ ಪರಿಣಾಮಕಾರಿಯಾಗಿ ಜಾರಿ ಇರಲಿದೆ. ಅನವಶ್ಯಕವಾಗಿ ತಿರುಗಾಡಿದರೆ ಪೊಲೀಸರು ಕೇಸ್ ಹಾಕುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಪೊಲೀಸರಿಗೆ ಕೊರೊನಾ ವಕ್ಕರಿಸಿದ ಹಿನ್ನೆಲೆ ಜಿಲ್ಲೆಯಿಂದ ಪಾದಯಾತ್ರೆಯಲ್ಲಿ ಬಾಗವಹಿಸಿದ್ದ 125 ಜನರಲ್ಲಿ 65 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಶೇ 60% ಗೂ ಹೆಚ್ಚಿನ ಜನರಿಗೆ ಸೋಂಕು ತಗುಲಿದೆ. ಮಂಡ್ಯ, ರಾಮನಗರ,ಹಾಸನ , ಜಿಲ್ಲೆಗಳಲ್ಲಿ ಪೊಲೀಸರಿಗೆ ಸೋಂಕು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಶ್ರೀಕಿ ಬಗ್ಗೆ ಮಾತನಾಡಿದ ಅವರು, ಆತನನ್ನು ಬಂಧಿಸಿದ ಮೇಲೆ ಗೊತ್ತಾಯಿತು ಅವನು ಅಪ್ರತಿಮ ಬುದ್ದಿವಂತ ಅಂತ., ಪೊಲೀಸರು ಶ್ರೀಕಿಗಿಂತ ಬುದ್ದಿವಂತರಾಗಬೇಕೆಂದು ತಿಳಿಸಿದರು.