ಚಿಕ್ಕಬಳ್ಳಾಪುರ: ಹುತಾತ್ಮ ದಿನಾಚರಣೆ ಅಂಗವಾಗಿ ಜಿಲ್ಲೆಯ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಸ ಗುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಿಂತಾಮಣಿ ಕೋರ್ಟ್ ನ್ಯಾಯಾಧೀಶರು ಚಾಲನೆ ನೀಡಿದ್ರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ಅನುಸರಿಸಿದಾಗ ಮಾತ್ರ ಸಾಮಾಜಿಕ ಅಭಿವೃದ್ಧಿ, ಬದಲಾವಣೆ ತರಲು ಸಾಧ್ಯ ಎಂದು ನ್ಯಾಯಾಧೀಶ ಹೆಚ್. ಎಸ್. ಮಂಜುನಾಥ್ ಹೇಳಿದರು.
ಸ್ವಚ್ಛತಾ ಕಾರ್ಯಕ್ರಮ ನಿರಂತವಾಗಿ ಇರಬೇಕು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಸ್ವಚ್ಛತೆ ಅನ್ನೋದು ಮನುಷ್ಯನ ಅವಿಭಾಜ್ಯ ಅಂಗ. ಸ್ವಚ್ಛತೆ ಇಲ್ಲದಿದ್ದರೆ ನಾನಾ ಕಾಯಿಲೆಗಳು ಬರುತ್ತವೆ. ಎಲ್ಲರೂ ಪ್ರತಿಕ್ಷಣದಲ್ಲೂ ಸ್ವಚ್ಛತೆಯಿಂದ ಇರಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕೆಂದರು ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಜರಾಂ ತಿಳಿಸಿದರು.