ETV Bharat / state

ಲಾಕ್‌ಡೌನ್ ಸಂಕಷ್ಟ.. ರೈತರ ಜಮೀನಿನಲ್ಲೆ ಕೊಳೆಯುತ್ತಿವೆ ಕಟಾವಿಗೆ ಬಂದ ಕುಂಬಳಕಾಯಿ.. - ರೈತರ ಸಂಕಷ್ಟ

ಕೊರೊನಾ ಲಾಕ್​ಡೌನ್ ಆಗಿರುವುದರಿಂದ ಮಾರುಕಟ್ಟೆಗೆ ಸಾಗಿಸಲಾಗದೆ ಕುಂಬಳಕಾಯಿಗಳು ಜಮೀನಿನಲ್ಲೇ ಕೊಳೆಯುತ್ತಿವೆ. ಇದರಿಂದ ರೈತರು ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ.

ಲಾಕ್ ಡೌನ್ ಸಂಕಷ್ಟ
ಲಾಕ್ ಡೌನ್ ಸಂಕಷ್ಟ
author img

By

Published : Apr 13, 2020, 10:11 AM IST

ಬಾಗೇಪಲ್ಲಿ : ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರೈತರು ಬೆಳೆದಿರುವ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆ ಆಗುತ್ತಿದೆ.

ಬಾಗೇಪಲ್ಲಿ ತಾಲೂಕು ಚೇಳೂರು ಹೋಬಳಿಯ ಚಾಕವೇಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮದ್ದಿರೆಡ್ಡಿಪಲ್ಲಿ ಗ್ರಾಮದ ರೈತ ಟಿ.ಕೃಷ್ಣಾರೆಡ್ಡಿ, ಚಿನ್ನಪ್ಪರೆಡ್ಡಿ ಮೂರು ಎಕರೆ ಬೆಳೆದ ಕುಂಬಳಕಾಯಿ ಬೆಳೆ ಮಣ್ಣು ಪಾಲಾಗಿದೆ. ಕೊರೊನಾ ಲಾಕ್​ಡೌನ್ ಆಗಿರುವುದರಿಂದ ಮಾರುಕಟ್ಟೆಗೆ ಸಾಗಿಸಲಾಗದೆ ಕುಂಬಳಕಾಯಿಗಳು ಜಮೀನಿನಲ್ಲೇ ಕೊಳೆಯುತ್ತಿವೆ. ಇದರಿಂದ ರೈತರು ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ.

ಒಂದು ಕಡೆ ಕೂಲಿಕಾರರ ಅಭಾವ ಕಾಡುತ್ತಿದ್ರೆ, ಮತ್ತೊಂದೆಡೆ ಮಾರುಕಟ್ಟೆಗೆ ಕುಂಬಳಕಾಯಿ ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಬೆಳೆ ಬಂದಿದ್ದರೂ ಅವರು ಕಟಾವು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಒಂದು ವೇಳೆ ಕಟಾವು ಮಾಡಿದರೂ ಮಾರಾಟ ಹೇಗೆ ಮಾಡಬೇಕು ಎಂಬ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕಿದೆ ಹಾಗೂ ಸರ್ಕಾರದಿಂದ ಧನಸಹಾಯ ಮಾಡಲು ರೈತರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.