ETV Bharat / state

ಚಿಕ್ಕಬಳ್ಳಾಪುರದಲ್ಲಿ ಲಾರಿ ಕಳ್ಳತನ... ಚೇಸ್ ಮಾಡಿ ಹಿಡಿದ ಸ್ಥಳೀಯರು! - chikkaballapura locals catch the lorry thief

ಚಿಕ್ಕಬಳ್ಳಾಪುರ ಮಂಜುನಾಥ್ ಎಂಬುವವರು ತಮ್ಮ ಲಾರಿಯನ್ನು ಲಾಕ್​ಡೌನ್​ ಹಿನ್ನೆಲೆ ಕೆಲಸವಿಲ್ಲದೆ ಮನೆಯ ಮುಂದೆ ನಿಲ್ಲಿಸಿದ್ದರು. ಇದನ್ನು ಮನಗಂಡಿದ್ದ ಕಳ್ಳ ಯಾರೂ ಇಲ್ಲದ ವೇಳೆ ಸಮಯ ನೋಡಿಕೊಂಡು ಚಲಾಯಿಸಿಕೊಂಡು ಹೋಗಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.

locals-catch-the-lorry-thief-in-chikkaballapura
ಲಾರಿ ಕಳ್ಳತನ ಕಳ್ಳನನ್ನು ಹಿಡಿದ ಸ್ಥಳೀಯರು
author img

By

Published : Jun 4, 2021, 8:32 PM IST

ಚಿಕ್ಕಬಳ್ಳಾಪುರ: ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದವನನ್ನು ಸ್ಥಳೀಯರು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರ ಹೊರವಲಯದ ತಿಮ್ಮಸಂದ್ರ ಬಳಿ ನಡೆದಿದೆ.

ಲಾರಿ ಕಳ್ಳತನ ಕಳ್ಳನನ್ನು ಹಿಡಿದ ಸ್ಥಳೀಯರು

ತಿಮ್ಮಸಂದ್ರ ವಾರ್ಡ್‌ನ ಮಂಜುನಾಥ್ ಎಂಬುವವರು ತಮ್ಮ ಲಾರಿಯನ್ನು ಲಾಕ್​ಡೌನ್​ ಹಿನ್ನೆಲೆ ಕೆಲಸವಿಲ್ಲದೆ ಮನೆಯ ಮುಂದೆ ನಿಲ್ಲಿಸಿದ್ದರು. ಇದನ್ನು ಮನಗಂಡಿದ್ದ ಕಳ್ಳ ಯಾರೂ ಇಲ್ಲದ ವೇಳೆ ಸಮಯ ನೋಡಿಕೊಂಡು ಚಲಾಯಿಸಿಕೊಂಡು ಹೋಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ನಂತರ ತಮ್ಮ ಬೈಕ್‌ನಲ್ಲಿ ಚೇಸ್ ಮಾಡಿ ನಡುರಸ್ತೆಯಲ್ಲೇ ಲಾರಿಯನ್ನು ಅಡ್ಡಗಟ್ಟಿದ್ದಾರೆ. ಆದರೆ ಈ ವೇಳೆ ಲಾರಿ ಕಳ್ಳ ಎಸ್ಕೇಪ್ ಆಗಿದ್ದಾನೆ.

ನಂತರ ಸ್ಥಳೀಯರೇ ಕಳ್ಳನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

ಓದಿ: ‘KSRTC’ ಹೆಸರು ಕೈತಪ್ಪಿಲ್ಲ.. ಇದು ಸತ್ಯಕ್ಕೆ ದೂರವಾದ ವರದಿ : ಕೆಎಸ್‌ಆರ್‌ಟಿಸಿ ಎಂಡಿ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.