ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 107 ಜನರಲ್ಲಿ ಹೊಸದಾಗಿ ಸೋಂಕು ಧೃಡಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ 62, ಬಾಗೇಪಲ್ಲಿ 20, ಚಿಂತಾಮಣಿ 6, ಗೌರಿಬಿದನೂರು 15, ಗುಡಿಬಂಡೆ - 4 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6635 ಏರಿಕೆಯಾಗಿದೆ.ಇನ್ನೂ 6 ಸೋಂಕಿತರಿಗೆ ಐಎಲ್ಐ ಸಂಪರ್ಕ,37 ಡೊಮೆಸ್ಟಿಕ್ ಟ್ರಾವೆಲ್ ಸೇರಿದಂತೆ 64 ಸೋಂಕಿತರಿಗೆ, ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದೆ.
ಚಿಕ್ಕಬಳ್ಳಾಪುರ 20, ಬಾಗೇಪಲ್ಲಿ 1,ಚಿಂತಾಮಣಿ 29,ಗೌರಿಬಿದನೂರು 19,ಗುಡಿಬಂಡೆ 1,ಶಿಡ್ಲಘಟ್ಟದ 8 ಜನ ಕೋವಿಡ್ನಿಂದ ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 5600 ಆಗಿದೆ. ಚಿಂತಾಮಣಿ ಮೂಲದ 45 ವರ್ಷದ ಪುರುಷ ಹಾಗೂ ಚಿಕ್ಕಬಳ್ಳಾಪುರ 50 ವರ್ಷದ ಪುರುಷ ಇಂದು ಕೊರೊನಾದಿಂದ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೊನಾದಿಂದ ಮೃತರಾದವರ ಸಂಖ್ಯೆ 79 ಕ್ಕೆ ಏರಿಕೆಯಾಗಿದೆ.