ETV Bharat / state

ರಾಜ್ಯದಲ್ಲಿ ಕಾಂಗ್ರೆಸ್ ಬಲ ಪಡಿಸಲು ಕರ್ನಾಟಕ ಜಲಿಯನ್ ವಾಲಾಬಾಗ್ ಪಾದಯಾತ್ರೆ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷ ಹೆಚ್ಚಿನ ತಯಾರಿ ನಡೆಸುತ್ತಿದೆ. ಕಾಂಗ್ರೆಸ್ ಬಲಪಡಿಸಲು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ಧಿ ಪಡೆದ ವಿದುರಾಶ್ವತ್ಥದಿಂದ ಪಾದಯಾತ್ರೆ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

karnataka-jallianwala-bagh-padayatra-for-strengthen-congress
ರಾಜ್ಯದಲ್ಲಿ ಕಾಂಗ್ರೆಸ್ ಬಲ ಪಡಿಸಲು ಕರ್ನಾಟಕ ಜಲಿಯನ್ ವಾಲಾಬಾಗ್ ಪಾದಯಾತ್ರೆ
author img

By

Published : Aug 11, 2022, 1:41 PM IST

ಚಿಕ್ಕಬಳ್ಳಾಪುರ : ಜಿಲ್ಲೆಯ ಗೌರಿಬಿದನೂರಿನ ವಿದುರಾಶ್ವತ್ಥ, ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ಧಿ ಪಡೆದಿದೆ. ಇದೇ ಸ್ಥಳದಿಂದ ಈಗ ಕಾಂಗ್ರೆಸ್ ಪಕ್ಷ ಸಿದ್ದು ಹಾಗೂ ಡಿಕೆಶಿ ನೇತೃತ್ವದಲ್ಲಿ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರಾಜಕೀಯ ಪಾಳಯದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ.

ಹಿಂದೆ ಕಾಂಗ್ರೆಸ್‌ ನಾಯಕರು ಎಲ್ಲೇ ಚಳವಳಿ ನಡೆಸಿದರೂ ಹೋರಾಟದ ಸಂಕೇತವಾಗಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರು. ಬ್ರಿಟಿಷರು ಇದನ್ನು ನಿಷೇಧಿಸಿದ್ದರೂ ಮಂಡ್ಯದ ಶಿವಪುರದಲ್ಲಿ ನಡೆದ ತ್ರಿವರ್ಣ ಧ್ವಜ ಸತ್ಯಾಗ್ರಹ ಯಶಸ್ವಿಯಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ತಾಲೂಕಿನ ವಿದುರಾಶ್ವತ್ಥದಲ್ಲೂ ಧ್ವಜ ಸತ್ಯಾಗ್ರಹವಾದರೆ ಹೆಚ್ಚು ಜನರನ್ನು ಕಾಂಗ್ರೆಸ್‌ನತ್ತ ಆಕರ್ಷಿಸಬಹುದು ಎನ್ನುವ ಆಲೋಚನೆಯೊಂದಿಗೆ ಕಾಂಗ್ರೆಸ್ ಅಂದು ಸತ್ಯಾಗ್ರಹಕ್ಕೆ ಮುಂದಾಗಿತ್ತು.

ಆದರೆ, ಸತ್ಯಾಗ್ರಹ ಮಣಿಸಲು ಸಶಸ್ತ್ರ ಪೊಲೀಸರು ಒಂದು ತಿಂಗಳಿಂದ ಷಡ್ಯಂತ್ರ ಹೆಣೆದಿದ್ದು 1938 ರಂದು ಹೋರಾಟಗಾರರು ಧ್ವಜ ಹಾರಿಸಲು ಮುಂದಾದಾಗ ಲಾಠಿಚಾರ್ಜ್ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು,ಇಟ್ಟಿಗೆ ತೂರಿದ್ದರು, ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ಗೆ 32 ಕ್ಕೂ ಹೆಚ್ಚು ಜನ ಹುತಾತ್ಮರಾಗಿದ್ದಕ್ಕಾಗಿ, ಕರ್ನಾಟಕದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ಥಳವಾಗಿ ಇದು ಪ್ರಸಿದ್ಧಿ ಪಡೆಯಿತು.

ಕರ್ನಾಟಕ ಜಲಿಯನ್ ವಾಲಾಬಾಗ್​ ವಿದುರಾಶ್ವತ್ಥ : ಸದ್ಯ ಇದೇ ಸ್ಥಳದಿಂದ ಈಗಿನ ಸ್ಥಳೀಯ ಶಾಸಕ ಎಚ್ ಎನ್ ಶಿವಶಂಕರ್‌ರೆಡ್ಡಿ ಪಾದಯಾತ್ರೆ ನಡೆಸುತ್ತಿರುವುದು ವಿರೋಧ ಪಕ್ಷಗಳಲ್ಲಿಯೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಜಲಿಯನ್ ವಾಲಾಬಾಗ್​ನಿಂದ ಪಾದಯಾತ್ರೆ ಮಾಡಿ ಜನರನ್ನು ಕಾಂಗ್ರೆಸ್ ನತ್ತ ಸೆಳೆಯುವ ಯೋಜನೆಯನ್ನು ಕಾಂಗ್ರೆಸ್ ರೂಪಿಸಿದೆ.

ಇನ್ನೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದಾವಣಗೆರೆಯ ಕಾರ್ಯಕ್ರಮದ ಬಳಿಕ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಬಲ ಪಡಿಸಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಚಿಂತಾಮಣಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿದ್ದು, ಈಗ ಮತ್ತೆ ಜಿಲ್ಲೆಯ ಗೌರಿಬಿದನೂರ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಇಲ್ಲಿನ ಅಲಕಾಪುರದ ಶ್ರೀ ಚೆನ್ನಸೋಮೇಶ್ವರ ದೇವಸ್ಥಾನದಿಂದ ಕರ್ನಾಟಕದ ಜಲಿಯನ್ ವಾಲಾ ಬಾಗ್ ವಿದುರಾಶ್ವತ್ಥ ತನಕ ಕಾಂಗ್ರೆಸ್ ಪಕ್ಷವು ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.

ಒಟ್ಟಾರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಪಕ್ಷ ಬಲಪಡಿಸಲು ವಿವಿಧ ರೀತಿಯ ಕಸರತ್ತು ನಡೆಸುತ್ತಿದೆ.

ಇದನ್ನೂ ಓದಿ : ನಾನು ಸ್ಥಿತಪ್ರಜ್ಞನಿದ್ದೇನೆ: ಕಾಂಗ್ರೆಸ್ ಸಿಎಂ ಬದಲಾವಣೆ ಟ್ವೀಟ್​​​ಗೆ ಸಿಎಂ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.