ಚಿಕ್ಕಬಳ್ಳಾಪುರ: ಕನ್ನಡದ ಹಬ್ಬ ಎಂದರೆ ಕನ್ನಡದ ಜನತೆಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕಾಲೇಜುಗಳಲ್ಲಿ ಕನ್ನಡದ ಹಬ್ಬ ಅಂದರೆ ಕಲರ್ ಕಲರ್ ಡ್ರಸ್‌ಗಳಲ್ಲಿ ವಿದ್ಯಾರ್ಥಿಗಳು ಮಿಂಚುವುದು ಸರ್ವೆ ಸಾಮಾನ್ಯ. ಅದರಲ್ಲೂ ಇಲ್ಲಿನ ಎಂಜಿನಿಯರಿಂಗ್ ಕಾಲೇಜಿನ ಸಂಭ್ರಮಕ್ಕೆ ಪಾರವೇ ಇಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮೈಸೂರು ಸಿಲ್ಕ್ ಸೀರೆ ಧರಿಸಿ ಅಪ್ಪಟ ಕನ್ನಡತಿಯರಂತೆ ಗಮನ ಸೆಳೆದರು.
ಅಲ್ಲದೇ ಈ ನಾಡಿನ ಕುವರಿಯರಂತೆ ಕನ್ನಡ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಕನ್ನಡ ಭಾಷೆಯಲ್ಲಿಯೇ ಮಾತನಾಡಿ ಎಲ್ಲರ ಮನಸೆಳೆದಿದ್ದು, ಇದೆಕ್ಕೆಲ್ಲ ಸಾಕ್ಷಿ ಎಂಬಂತೆ ಕಾರ್ಯಕ್ರಮಕ್ಕೆ ಮೈಸೂರು ಮಹಾಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಭಾಗಿಯಾಗಿದ್ದರು.
ಮೈಸೂರ್ ಸಿಲ್ಕ್ ಸೀರೆ ಉಟ್ಟು ಮುಡಿಯಲ್ಲಿ ಮಲ್ಲಿಗೆ ಹೂ ಮುಡಿದು, ಪೂರ್ಣ ಕುಂಭ ಕಳಶ ಹೊತ್ತು ಡೊಳ್ಳು ಕುಣಿತದೊಂದಿಗೆ ಮೈಸೂರು ಮಹಾರಾಜರಿಗೆ ಅದ್ಧೂರಿಯಾಗಿ ಸ್ವಾಗತ ಕೋರುತಿರೋ ದೃಶ್ಯಗಳು ಚಿಕ್ಕಬಳ್ಳಾಪುರ ನಗರ ಹೊರವಲಯದ ಪ್ರತಿಷ್ಠಿತ ಎಸ್ಜೆಸಿಐಟಿ ಕಾಲೇಜು ಕ್ಯಾಂಪಸ್‌ನಲ್ಲಿ ಕಂಡು ಬಂತು.
ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಜೊತೆಗೆ ಕುವೆಂಪುರವರ 118 ನೇ ಜನ್ಮದಿನಾಚರಣೆ ಹಮ್ಮಿಕೊಂಡಿದ್ದು ಮುಖ್ಯ ಅಥಿತಿಗಳಾಗಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಭಾಗಿಯಾಗಿದ್ದರು. ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊದಲ ಬಾರಿ ಪದಾರ್ಪಣೆ ಮಾಡಿದ ಮೈಸೂರು ಮಹರಾಜರು ಜಿಲ್ಲೆಯ ಜೊತೆಗಿನ ಸಂಬಂಧ ಜಿಲ್ಲೆಯ ಸ್ವಾಭಾವಿಕ ವಾತಾವರಣ ಬಗ್ಗೆ ಹಾಡಿ ಹೊಗಳಿದರು, ಜೊತೆಗೆ ನಾಡಿನ ಭಾಷೆ ಸಂಪತ್ತನ್ನು ಉಳಿಸಿ ಬೆಳಸುವಂತೆ ಕಿವಿಮಾತು ಹೇಳಿದ್ದಾರೆ.
ವೇದಿಕೆ ಕಾರ್ಯಕ್ರಮದಲ್ಲಿ ಯದುವೀರ್ ಒಡೆಯರ್ ಮತ್ತು ನಿರ್ಮಾಲಾನಂದ ಸ್ವಾಮೀಜಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹರಿಸಿದರು. ನಂತರ ರಾಜ್ಯೋತ್ಸವ ಮತ್ತು ಕುವೆಂಪು ಜನ್ಮದಿನದ ನಿಮಿತ್ತ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಸ್ಜೆಸಿಐಟಿ ಕಾಲೇಜು ವೃಂದ ಹಮ್ಮಿಕೊಂಡಿತ್ತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಸಮೂಹ ನೃತ್ಯ ಗಾಯನ ವೀರಗಾಸೆ ಡೊಳ್ಳುಕುಣಿತ ಕಿರುಚಿತ್ರ ಸೇರಿದಂತೆ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕಾಲೇಜಿನಲ್ಲಿ ಕನ್ನಡರಾಜ್ಯೋತ್ಸವ ಇದ್ದುದರಿಂದ ವಿದ್ಯಾರ್ಥಿಗಳೆಲ್ಲ ಕನ್ನಡದಲ್ಲೇ ಚಾಟಿಂಗ್ ರೀಲ್ಸ್ ಮಾಡೋದು ವಿಶೇಷವಾಗಿತ್ತು.
ಮೈಸೂರಿಗೆ ಹೋದರೂ ಸಿಗದ ಮಹಾರಾಜರನ್ನು ಕಾಲೇಜಿನಲ್ಲಿ ಸಿಕ್ಕಿದ ಕೂಡಲೇ ಫೋಟೋಗಾಗಿ ವಿದ್ಯಾರ್ಥಿಗಳು ಮುಗಿಬಿದ್ದರು. ಕೆಲ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ನ್ನು ಕಣ್ಣಾರೆ ಕಂಡು ಸೆಲ್ಪಿ ಗಿಟ್ಟಿಸಿಕೊಂಡು ಸಂತಸ ಪಟ್ಟರು. ಇನ್ನು ನಿತ್ಯ ಪಾಶ್ಚಿಮಾತ್ಯ ಮತ್ತು ಮಾಡ್ರನ್ ಡ್ರಸ್ ನಲ್ಲಿರುತಿದ್ದ ವಿದ್ಯಾರ್ಥಿನಿಯರು ನಾಡಿನ ಸಂಸ್ಕೃತಿಯನ್ನು ಪರಂಪರೆ ಸಾರುವಂತೆ ಇಳಕಲ್ ಸೀರೆ ಉಟ್ಟು ದಿನದ ಮೆರುಗನ್ನು ಹೆಚ್ಚಿಸಿದ್ದರು.
ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಸರ್ಕಾರಿ ಕಚೇರಿಗಳ ಗೋಡೆ ಮೇಲೆ ವರ್ಲಿ, ರಿಯಾಲಿಸ್ಟಿಕ್ ಮತ್ತು ತ್ರಿಡಿ ಚಿತ್ರ ರಂಗು