ಚಿಕ್ಕಬಳ್ಳಾಪುರ : ಕುಡಿಯಲು ಹಣ ಕೊಡದ್ದಕ್ಕೆ ಪತಿ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಭದ್ರಂಪಲ್ಲಿಯಲ್ಲಿ ನಡೆದಿದೆ.
ಭದ್ರಂಪಲ್ಲಿಯ ರತ್ನಮ್ಮ (35) ಎಂಬುವರು ಮೃತ ಮಹಿಳೆ. ಈಕೆಯ ಪತಿ ಆದಿನಾರಾಯಣ ಎಂಬಾತ ಕುಡಿಯಲು ಹಣ ನೀಡದ್ದಕ್ಕೆ ಪತ್ನಿಯನ್ನ ಹೊಡೆದು ಕೊಂದಿದ್ದಾನೆ.
ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಆದಿನಾರಾಯಣ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.